ಉಪ ಚುನಾವಣೆ ; ವೀಕ್ಷಕರಾಗಿ ಡಾ. ಪ್ರದೀಪ್ ಡಿಮೆಲ್ಲೋ ಆಯ್ಕೆ

Written by Mahesha Hindlemane

Published on:

ಶಿವಮೊಗ್ಗ ; ಕೆಪಿಸಿಸಿ ವತಿಯಿಂದ ಮುಂಬರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅನೇಕರನ್ನು ಗ್ರಾ.ಪಂ, ಬೂತ್, ವಾರ್ಡ್‌, ಸ್ಥಳೀಯ ಬೂತ್‌ಗಳಿಗೆ ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇದರಲ್ಲಿ ಕೆಪಿಸಿಸಿ ವೈದ್ಯರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷರಾಗ ಡಾ.ಪ್ರದೀಪ್ ಡಿಮೆಲ್ಲೋ ಅವರನ್ನು 81ನೇ ಬೂತ್‌ಗೆ ಕೆಪಿಸಿಸಿ ಕೋ-ಆರ್ಡಿನೇಟರ್ ಆಗಿ ಆಯ್ಕೆ ಮಾಡಲಾಗಿದೆ.

ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿರುವ ಇವರು, ಸಮುದಾಯದ ಎಲ್ಲಾ ಪಂಗಡ, ಉಪ ಪಂಗಡಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಇವರೊಂದಿಗೆ ಶಿವಮೊಗ್ಗದ ದಂತ ವೈದ್ಯರಾಗಿರುವ ಡಾ.ಎಸ್.ದಿನೇಶ್ ಅವರನ್ನು 105 ಬೂತ್‌ನ ವೀಕ್ಷಕರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment