ರಿಪ್ಪನ್‌ಪೇಟೆಯಲ್ಲಿ ಡಾ. ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ

Written by malnadtimes.com

Published on:

RIPPONPETE ; ಇಲ್ಲಿನ ಕಸ್ತೂರಿ ಕನ್ನಡ ಸಂಘ ಹಾಗೂ ಡಾ.ಪುನೀತ್‌ರಾಜ್ ಅಭಿಮಾನಿ ಬಳಗದವರಿಂದ ಮೂರನೇ ವರ್ಷದ ಡಾ.ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮವು ವಿನಾಯಕ ವೃತ್ತದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಡಾ.ಪುನೀತ್‌ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಪುಷ್ಪನಮನ ಸಲ್ಲಿಸಿ ನಂತರ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಪುನೀತ್ ರಾಜ್‍ಕುಮಾರ್ ಚಿತ್ರರಂಗಕ್ಕೆ ಸೀಮಿತವಾಗದೆ ಸಾಮಾಜಿಕ ಕ್ಷೇತ್ರದಲ್ಲಿ ನೂರಾರು ಮಾನವೀಯ ಸೇವೆಗಳನ್ನು ಮಾಡುವ ಮೂಲಕ ಜನರ ಅಂತರಾತ್ಮದಲ್ಲಿ ನೆಲೆಸಿದ್ದಾರೆ. ಅವರು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಅಗಲಿರಬಹುದು ಅವರು ನೀಡಿದ ಮೌಲ್ಯಭರಿತ ಕೊಡುಗೆ ಅಪಾರವಾಗಿವೆ. ಅವು ಎಂದೆಂದಿಗೂ ಅತ್ಯಂತ ಸ್ಮರಣೀಯವಾಗಿದ್ದು ಅಭಿಮಾನಿ ದೇವರಲ್ಲಿ ಶಾಶ್ವತವಾಗಿ ಉಳಿಯುವಂತಾಗಿವೆ ಎಂಬುದಕ್ಕೆ ಇಂದಿನ ಪುಣ್ಯಸ್ಮರಣೆಯಲ್ಲಿ ಸೇರಿರುವ ಅಭಿಮಾನಿಗಳೇ ಸಾಕ್ಷಿಯಾಗಿದೆ ಎಂದರು.

ಡಾ.ಪುನೀತ್‌ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ನಿರಂಜನ ಅಧ್ಯಕ್ಷತೆ ವಹಿಸಿದ್ದರು.
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಧನಲಕ್ಷ್ಮಿ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸಂಘದ ಜಿ.ಎಸ್.ವರದರಾಜ್, ಸದಸ್ಯರಾದ ಆರ್.ಎ.ಚಾಬುಸಾಬ್, ಮೆಣಸೆ ಆನಂದ್, ನಿರ್ಮಲ, ಲೇಖನ, ಹಸನಬ,ರಮೇಶ್ ಫ್ಯಾನ್ಸಿ, ಶ್ರೀಧರ, ಉಲ್ಲಾಸ, ಗಣಪತಿ ಗವಟೂರು. ಹೆಚ್.ಎನ್.ಉಮೇಶ್, ವೇದಾ, ಆರ್.ಡಿ.ಶೀಲಾ, ಡಿ.ಈ.ಮಧುಸೂದನ್, ಆಸಿಫ್, ಸಾರಾಬಿ, ಜಿ.ಡಿ.ಮಲ್ಲಿಕಾರ್ಜುನ, ಪಿಎಸ್‌ಐ ಪ್ರವೀಣ್ ಕುಮಾರ್, ಪ್ರಕಾಶ ಪಾಲೇಕರ್, ಮಂಜುನಾಥ ಕಾಮತ್, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಶ್ವೇತಾ, ಯೋಗೇಂದ್ರಪ್ಪಗೌಡ, ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ಅಭಿಮಾನಿ ಬಳಗ ಹಾಗೂ ಕಲಾಕೌಸ್ತುಭ ಕನ್ನಡ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Comment