ಶಿವಮೊಗ್ಗ : ಸಿಪಿಐ ದೇವರಾಜ್ ನೇತೃತ್ವದಲ್ಲಿ ಸಂಚಾರ ಠಾಣೆ ಪೊಲೀಸರು ಇಂದು ಬೆಳಿಗ್ಗೆ ನಗರ ವ್ಯಾಪ್ತಿಯ ಶಾಲಾ ಮತ್ತು ಕಾಲೇಜು ವಾಹನಗಳ ಮೇಲೆ ದಿಢೀರ್ ತಪಾಸಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ನಡೆಸುತ್ತಿದ್ದ ನಾಲ್ವರು ಚಾಲಕರ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಿಸಲಾಗಿದೆ.
ಶಿವಮೊಗ್ಗದ ಪ್ರಮುಖ ಸ್ಥಳಗಳಲ್ಲಿ ನಡೆದ ತಪಾಸಣೆಯಲ್ಲಿ, ವಿದ್ಯಾರ್ಥಿಗಳನ್ನು ಸಾಗಿಸುವ ಎಲ್ಲಾ ವಾಹನಗಳು ಮತ್ತು ಬಸ್‌ಗಳನ್ನು ನಿಲ್ಲಿಸಿ, ಚಾಲಕರ ಮದ್ಯ ಸೇವನೆ ಕುರಿತು ಪರಿಶೀಲನೆ ನಡೆಯಿತು. ಸಂಚಾರ ಠಾಣೆಯ ಅಧಿಕೃತ ಪ್ರಕಟಣೆಯಲ್ಲಿ ನಾಲ್ವರು ಚಾಲಕರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ತಿಳಿಸಲಾಗಿದೆ.

ಇದೆ ವೇಳೆ, ಶಾಲಾ ವಾಹನಗಳ ವಿಮೆ, ಎಮಿಷನ್ ರಿಪೋರ್ಟ್ ಮತ್ತು ಫಿಟ್‌ನೆಸ್ ಸರ್ಟಿಫಿಕೇಟ್ ಚಾಲನೆಯಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕೆಂಬ ನಿಯಮಗಳ ಬಗ್ಗೆ ಚಾಲಕರಿಗೆ ಸೂಚನೆ ನೀಡಲಾಯಿತು. ಜೊತೆಗೆ, ವಾಹನಗಳ ಸುರಕ್ಷತಾ ಸ್ಥಿತಿಗಳ ಪರಿಶೀಲನೆ ಕೂಡ ನಡೆಸಲಾಯಿತು.
ಈ ತಪಾಸಣೆ ಮೂಲಕ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹೆಚ್ಚಿಸುವುದು ಮತ್ತು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಸಂಚಾರ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

