ಮಕ್ಕಳಿಗೆ ಸಂಸ್ಕಾರದೊಂದಿಗೆ ಕಲಿಕೆಗೆ ಅನುಗುಣವಾಗಿ ಪ್ರೋತ್ಸಾಹಿಸಿ ; ಪಟ್ಲ ಸತೀಶ್

Written by malnadtimes.com

Published on:

RIPPONPETE ; ಸನಾತನ ಸಂಸ್ಕೃತಿ ಸಂಸ್ಕಾರವನ್ನು ಇಂದಿನ ಯುವ ಪೀಳಿಗಗೆ ತಿಳಿಸುವ ಕೆಲಸವನ್ನು ಪೋಷಕವರ್ಗ ಮಾಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಅವರಲ್ಲಿನ ಕಲಿಕೆಗನುಗುಣವಾಗಿ ಪ್ರೋತ್ಸಾಹಿಸಿ ಎಂದು ಪ್ರಸಿದ್ಧ ಭಾಗವತ, ಯಕ್ಷ ಧ್ರುವ ಪಟ್ಲ ಸತೀಶ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಮತ್ತು 69ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನ ರಂಗ ತರಬೇತಿ ನೀಡಿ ಅವರನ್ನು ಧರ್ಮ ಜಾಗೃತಗೊಳಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವೆಂದ ಅವರು, ಶಾಲಾ ಹಂತದಲ್ಲಿ ಯಕ್ಷಗಾನದ ಕಲೆಯನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳುವಂತೆ ನಮ್ಮ ಸಂಸ್ಥೆ ಸ್ವಂತ ಖರ್ಚಿನಲ್ಲಿ ತಾಲ್ಲೂಕಿನ ಹಲವು ಶಾಲೆಗಳಿಗೆ ಹೋಗಿ ಉಚಿತ ತರಬೇತಿ ನೀಡಲಾಗಿದೆ ಎಂದರು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಪಿ.ಸುಧೀರ್, ಎನ್.ಸತೀಶ್, ಪದ್ಮಸುರೇಶ್, ರೇಖಾ ರವಿ, ನಾಗರತ್ನ ದೇವರಾಜ್, ಗೀತಾ, ಸೀತಾ, ಗೀತಾ ಅಣ್ಣಪ್ಪ, ಲೀಲಾಶಂಕರ್, ಆಶ್ವಿನಿ ಸತೀಶ್, ಉಮಾ ಸುರೇಶ್, ಲಕ್ಷ್ಮಿ ಶ್ರೀನಿವಾಸ, ಸಂದೀಪ ಶೆಟ್ಟಿ, ದೀಪಾ ಸುಧೀರ್, ಆಚಾರ್, ಹಿರಿಯಣ್ಣ ಭಂಡಾರಿ, ಕಲಾವತಿ ಚಂದ್ರಪ್ಪ, ಆಶಾ ಬಸವರಾಜ, ದಿವಾಕರ, ರಾಘವೇಂದ್ರ, ಪ್ರವೀಣ್ ಆಚಾರ್, ಶೈಲಾ ಆರ್.ಪ್ರಭು, ರಾಘು ಆರ್ಟ್ಸ್ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.


ರಿಪ್ಪನ್‌ಪೇಟೆಯಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ

ರಿಪ್ಪನ್‌ಪೇಟೆ ; ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರ 31ನೇ ವರ್ಷದ ವಾರ್ಷೀಕೋತ್ಸವ ಮತ್ತು 69ನೇ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ದಿ.ಬಿಜು ಮಾರ್ಕೋಸ್ ಸ್ಮರಣಾರ್ಥ ಜಿಲ್ಲಾ ಮಟ್ಟದ
ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ ಜರುಗಿತು.

ಹಿರಿಯ ವಾಲಿಬಾಲ್ ಆಟಗಾರರಾದ ಜಿ.ಎಸ್.ಶ್ರೀನಿವಾಸ ಮತ್ತು ಪ್ರಕಾಶ ಇವರು ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲ್ ಎಸೆಯುವ ಮೂಲಕ ಚಾಲನೆ ನೀಡಿದರು‌.

ಟಿ.ಆರ್.ಕೃಷ್ಣಪ್ಪ, ಪದ್ಮಾ ಸುರೇಶ್, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಪಿ.ಸುದೀರ್, ಎಂ.ಸುರೇಶಸಿಂಗ್,ದೇವರಾಜ್ ಕುಷನ್, ದಿವಾಕರ ಕೆದಲುಗುಡ್ಡೆ, ಮುರುಳಿಧರ, ಲೀಲಾಶಂಕರ್, ಶೈಲಾ ಆರ್.ಪ್ರಭು, ಗೀತಾ ಅಣ್ಣಪ್ಪ, ರೇಖಾರವಿ, ಅಶ್ವಿನಿ, ನಾಗರತ್ನ ದೇವರಾಜ್, ಉಮಾ ಸುರೇಶ್, ದೀಪಾ ಸುಧೀರ್, ಸೀತಾ, ಗೀತಾ, ಇನ್ನಿತರರು ಹಾಜರಿದ್ದರು.


ನಿಧನವಾರ್ತೆ :

ರಿಪ್ಪನ್‌ಪೇಟೆ : ಸಮೀಪದ ಬಾಳೂರು ರೈತ ಪರಮೇಶ (50) ಶಿವಮೊಗ್ಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಮೃತರು ಪತ್ನಿ, ಮಕ್ಕಳು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.


ರಿಪ್ಪನ್‌ಪೇಟೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಸೈಕಲ್ ಸ್ಪರ್ಧೆ

RIPPONPETE ; ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರ 31ನೇ ವರ್ಷದ ವಾರ್ಷಿಕೋತ್ಸವ ಮತ್ತು 69ನೇ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ತಾಲ್ಲೂಕು ಮಟ್ಟದ ಸೈಕಲ್ ಸ್ಪರ್ಧೆಗೆ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಕನ್ನಡ ಬಾವುಟ ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿದರು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಪಿ.ಸುಧೀರ್, ಎಂ.ಸುರೇಶಸಿಂಗ್, ದೇವರಾಜ್ ಕುಷನ್, ದಿವಾಕರ, ಹಿರಿಯಣ್ಣ. ಭಂಡಾರಿ, ಶ್ರೀನಿವಾಸ ಆಚಾರ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Comment