ಹೊಸನಗರ ; ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದ್ದು ಕಾಲ-ಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಹಾಗೂ ಪ್ರತಿದಿನ ಒಂದು ಗಂಟೆ ವ್ಯಾಯಾಮದಲ್ಲಿ ನಿರತರಾಗಿರುವುದರಿಂದ ಮಹಿಳೆಯ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಹೊಸನಗರದ ಆರೋಗ್ಯ ಇಲಾಖೆಯ ಆಪ್ತ ಸಹಾಯಕಿ ಸುಷ್ಮಾ ಶ್ರೀನಿವಾಸ್ ಹೇಳಿದರು.
ಇಲ್ಲಿನ ಮಹಿಳಾ ಚುಂಚಾದ್ರಿ ಒಕ್ಕಲಿಗರ ಸಂಘ, ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸ್ಫೋಟ್ಸ್ ಅಸೋಸಿಯೇಷನ್ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಆರೋಗ್ಯಕರ ಜೀವನದ ಬಗ್ಗೆ ಅವರು ಮಾಹಿತಿ ನೀಡುವ ಸಂದರ್ಭದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರದ ಚುಂಚಾದ್ರಿ ಮಹಿಳಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಮೈನಾವತಿ ರಾಜಮೂರ್ತಿ ವಹಿಸಿ ಮಾತನಾಡಿ, ಮಹಿಳೆಯರು ಒಗ್ಗಟಿನಿಂದ ಸಮಾಜ ಸೇವೆ ಮಾಡುವುದರಿಂದ ಮಹಿಳೆಯ ಘನತೆ ಹೆಚ್ಚುತ್ತದೆ ಈ ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನು ಹೆಚ್ಚಿಸಿಕೊಳ್ಳಬಹುದು ಯಾವುದೇ ಸಂಘ-ಸಂಸ್ಥೆಗಳಲ್ಲಿ ಮಹಿಳೆಯರ ಪಾತ್ರ ಹಿರಿದಾಗಿರುತ್ತದೆ. ಯಾವುದೇ ಕೆಲಸ ಮಾಡುವುದಕ್ಕೂ ಮಹಿಳೆಯರು ಮುಂದೆ ಬರಬೇಕು ಹಾಗೂ ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡಬೇಕೆಂದರು.
ಈ ಕಾರ್ಯಕ್ರಮದಲ್ಲಿ ಜೇಸಿಐ ಕೊಡಚಾದ್ರಿಯ ಕಾರ್ಯದರ್ಶಿ ಜೆ ಸಿ ಮಹೇಶ್, ಮಲ್ನಾಡ್ ಲೇಡಿ ಜೇಸಿಐ ಅಧ್ಯಕ್ಷೆ ಜೆ ಸಿ ಶೈಲಾ ಕೇಶವ್, ಜೇಸಿ ಜ್ಯೋತಿ ಪೂರ್ಣೇಶ್, ಜೇಸಿ ರೇಷ್ಮಾ ಹರೀಶ್, ರತಿದೇವಿ ದೇವೇಂದ್ರಪ್ಪ, ವಿಮಲಾ ಜಾಲೆಂದ್ರಪ್ಪ, ಚಂದ್ರಕಲಾ ಮಹೇಶ್, ವಿಜಯಾ ಗುಂಡಪ್ಪ, ವೇದಾವತಿ ಸುಬ್ಬಯ್ಯಗೌಡ, ವಂಸತಮ್ಮ ಜನಾರ್ಧನ್ ಗೌಡ, ಸವಿತಾ ಮಹಾಬಲ, ಶೈಲಾ ಸೋಮಣ್ಣ, ಮೈತ್ರಿ ಅಶೋಕ್, ಸುಶೀಲ ಕೃಷ್ಣ, ದಿವ್ಯಾ ಮಧು, ಚೇತನ ವಿಷ್ಣು, ಸುಶ್ಮಿತಾ ಮಹೇಶ್, ರೇಖಾ ಹರೀಶ್, ಚಿತ್ರ ಧನಂಜಯ್, ಸಂದ್ಯಾ ರತ್ನಾಕರ್, ಪೃಥ್ವಿ ಕೃಷ್ಣಮೂರ್ತಿ, ಅಮೃತಾ ಉಮೇಶ್, ಚೇತನಾ ಪ್ರದೀಪ್, ಸುಮಾ ಮಂಜುನಾಥ್, ಶ್ರೀಮತಿ ನಾಗೇಶ್ ಉಪಸ್ಥಿತರಿದ್ದರು.