ಜಾನುವಾರು ಕಟ್ಟಲು ಹೋದ ರೈತ ನೀರುಪಾಲು !

Written by Mahesha Hindlemane

Published on:

MUDIGERE | ಜಾನುವಾರು ಕಟ್ಟಲು ಹೋದ ರೈತನೋರ್ವ ಆಕಸ್ಮಿಕವಾಗಿ ಜಾರಿಬಿದ್ದು ಹೊಳೆ ಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಬೈದುವಳ್ಳಿ ಗ್ರಾಮದ ಕೃಷಿಕ ಬಿ.ಎಲ್. ಗೋಪಾಲಗೌಡ (63) ಮೃತ ರೈತ. ಈತ ಜಾನುವಾರು ಕಟ್ಟಲು ಹೋದಾಗ ತುಂಬಿ ಹರಿಯುತ್ತಿದ್ದ ಹೇಮಾವತಿ ಉಪನದಿಗೆ ಜಾರಿ ಬಿದ್ದಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ಮೇಲೇಳಲಾಗದೆ ಹೊಳೆಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾನೆ‌ ಎನ್ನಲಾಗಿದೆ.

ಆನೆ ದಾಳಿ, ಮೃತ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಅವಿವಾಹಿತರಾಗಿದ್ದ ಗೋಪಾಲ್ ಗೌಡ ಕೃಷಿಕರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗೋಣಿಬೀಡು ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Leave a Comment