RIPPONPETE ; ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋ ರೂಂನಲ್ಲಿ ಕಳೆದ ಮೂರು ವರ್ಷದ ಹಿಂದೆ ಕಳಪೆ ಗುಣಮಟ್ಟದ ಹೆಸರಾಂತ ಜಾನ್ ಡೀರ್ ಟ್ರ್ಯಾಕ್ಟರ್ ಅನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಲಾದ ಮಂಡ್ರಳ್ಳಿ ರೈತರಾದ ಲಕ್ಷ್ಮಿನಾರಾಯಣ ಹಾಗೂ ಸತೀಶ್ ಮತ್ತು ರಾಜೇಂದ್ರ ಎಂಬುರಿಗೆ ನೀಡಿ ವಂಚಿಸಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ರಾಜ್ಯಾಧ್ಯಕ್ಷ ಡಾ.ರವಿಶೆಟ್ಟಿ ಬೈಂದೂರು ಇವರು ಟ್ರ್ಯಾಕ್ಟರ್ ಕಂಪನಿ ವ್ಯವಸ್ಥಾಪಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
ಕಳೆದ ಮೂರು ವರ್ಷದ ಹಿಂದೆ ಖರೀದಿಲಾದ ಟ್ಯ್ಯಾಕ್ಟರ್‌ನ ಮನೆಗೆ ತರುವ ವೇಳೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಯಂತ್ರದಲ್ಲಿ ತಾಂತ್ರಿಕ ದೋಷವನ್ನು ಸರಿಪಡಿಸುವ ಬಗ್ಗೆ ಷೋ ರೂಂ ಸೇಲ್ಸ್ ಮನ್ ಜೊತೆ ಸಂಪರ್ಕಿಸಿ ಚರ್ಚಿಸಲಾಗಿ ಆಗ ಸೇಲ್ಸ್ ಮನ್ ಕಂಪನಿಯ ವ್ಯವಸ್ಥಾಪಕರ ಗಮನಕ್ಕೆ ತರುವುದರೊಂದಿಗೆ ದುರಸ್ಥಿಗೊಳಿಸುವ ಇಲ್ಲವೇ ವಾರಂಟಿಯಂತೆ ತಮಗೆ ಬದಲಿ ವಾಹನ ನೀಡುವ ಭರವಸೆ ನೀಡಿದ್ದು ಮೂರು ವರ್ಷಗಳಿಂದಲೂ ಇದನ್ನೆ ಹೇಳಿಕೊಂಡು ಟ್ರ್ಯಾಕ್ಟರ್ ಖರೀದಿಸಿದ ರೈತರನ್ನು ನಿತ್ಯ ಅಲೆಯುವಂತೆ ಮಾಡಿ ಈಗ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು.
ಲಕ್ಷಾಂತರ ರೂಪಾಯಿ ಹಣವನ್ನು ಹಾಕಿ ಕೃಷಿ ಚಟುವಟಿಕೆಗಾಗಿ ಖರೀದಿಸಲಾದ ಟ್ರ್ಯಾಕ್ಟರ್ ಇದ್ದರೂ ಬಾಡಿಗೆ ಟ್ರ್ಯಾಕ್ಟರ್ ತಂದು ಕೃಷಿ ಚಟುವಟಕೆ ಮಾಡುವ ಅನಿರ್ವಾತೆ ಎದುರಾಗಿದೆ. ಕಂಪನಿ ವ್ಯವಸ್ಥಾಪಕ ದುರಂಹಕಾರದ ಮಾತನಾಡುವ ಮೂಲಕ ರೈತನಿಗೆ ಬೆದರಿಕೆ ಹಾಕಿರುವುದನ್ನು ವಿರೋಧಿಸಿ ಈಗಾಗಲೇ ರಿಪ್ಪನ್‌ಪೇಟೆ ಠಾಣೆಗೆ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಜಿಲ್ಲಾ ಸಂಘಟನೆಯವರು ದೂರು ನೀಡುವ ಮೂಲಕ ಕಂಪನಿಯವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರೂ ಕೂಡಾ ಕಂಪನಿಯ ಮಾಲೀಕ ಈವರೆಗೂ ಠಾಣೆಗೆ ಬಾರದೇ ದರ್ಪತೋರಿಸುವ ವರ್ತನೆಯಲ್ಲಿ ತೊಡಗಿದ್ದು ಇನ್ನು ಎರಡು ದಿನಗಳ ಕಾಲಾವಕಾಶ ನೀಡಿ ಅಷ್ಟರೊಳಗೆ ಬಂದು ಅನ್ಯಾಯಕ್ಕೆ ಒಳಗಾಗಿರುವ ರೈತನಿಗೆ ನ್ಯಾಯ ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ನಾವು ಉಗ್ರ ಪ್ರತಿಭಟನೆಯನ್ನು ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋ ರೂಂ ಎದುರು ಹಮ್ಮಿಕೊಳ್ಳುವ ಮೂಲಕ ರೈತನಿಗೆ ಬೆಂಬಲವಾಗಿ ನಿಲ್ಲುತ್ತೇವೆಂದು ಎಚ್ಚರಿಕೆ ನೀಡಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಮಹಿಳಾ ಪರಿಷತ್‌ನ ರಾಜ್ಯಾಧ್ಯಕ್ಷ ಪೂಜಾಶೆಟ್ಟಿ, ರೈತ ಸತೀಶ ಮಂಡ್ರಳ್ಳಿ, ರಾಜೇಂದ್ರ ಸಾವಂತೂರು ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತನ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ.ವೇದಾವತಿ, ನಿರ್ದೇಶಕರಾದ ನಾಗೇಶ, ಎನ್.ಗೀತಾ ಅಣ್ಣಪ್ಪ, ಅನ್ನಪೂರ್ಣ ರವಿಕುಮಾರ್ ಹೆಚ್, ಸೀತಮ್ಮ ರಾಜು, ಕೆ.ಸುಶೀಲ ಇನ್ನಿತರರು ಹಾಜರಿದ್ದರು.