ಹೆಚ್ಚುವರಿ ಶಿಕ್ಷಕರ ವರ್ಗಾವಣೆ ; ಆನೆಗದ್ದೆ ಶಾಲೆ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ

Written by Mahesha Hindlemane

Published on:

ಹೊಸನಗರ ; ಹೆಚ್ಚುವರಿ ಪಟ್ಟಿಯಿಂದ ಈ ಶಾಲೆಯ ಅನ್ವಿತಾ ಸಿ ಎಂಬ ಶಿಕ್ಷಕಿಯನ್ನು ಕೈ ಬೀಡಬೇಕೆಂದು ಸುಮಾರು 41 ವಿದ್ಯಾರ್ಥಿಗಳು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್‌ ಸಂದರ್ಭದಲ್ಲಿ ಮಾತನಾಡಿ, ನಮ್ಮ ಶಾಲೆಗೆ 4 ಜನ ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಇವರು ಹಿಂದಿನ ವರ್ಷದ ಮಕ್ಕಳ ಗಣತಿಯನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಹೊರಟಿದ್ದಾರೆ. ಎಸ್‌ಡಿಎಂಸಿ ಸದಸ್ಯರ ಹಾಗೂ ಶಿಕ್ಷಕರ ಹೋರಾಟದ ಫಲವಾಗಿ ಕಳೆದ ವರ್ಷಕ್ಕಿಂತ ಈ ವರ್ಷ 20 ಮಕ್ಕಳು ಹೆಚ್ಚುವರಿಯಾಗಿ ದಾಖಲಾಗಿದ್ದಾರೆ. ಶಾಲೆಯ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಶಿಕ್ಷಕಿ ಅನ್ವಿತಾರವರು ಹೆಚ್ಚುವರಿ ಎಂದು ಪ್ರಕಟವಾಗಿದ್ದು ನಮ್ಮ ಶಾಲೆಯಿಂದ ಅವರನ್ನು ಕಳುಹಿಸುವುದಾದರೆ ಮಕ್ಕಳ ಪಾಠ ಪ್ರವಚನ ಶಾಲೆಯ ಕಾರ್ಯ ಚಟುವಟಿಕೆಗೆ ತೊಂದರೆಯಾಗುತ್ತದೆ. ಹೊಸದಾಗಿ ದಾಖಲಾದ ಮಕ್ಕಳು ಟಿ.ಸಿಯನ್ನು ತೆಗೆದುಕೊಂಡು ಹೋಗುತ್ತಾರೆ. ಶಾಲೆಯ ದಾಖಲಾತಿ ಮತ್ತೆ ಕುಸಿದು ಸರ್ಕಾರಿ ಶಾಲೆಯನ್ನೇ ಮುಚುವ ಸ್ಥಿತಿ ತಲುಪುತ್ತದೆ. ಆದ್ದರಿಂದ ಮಕ್ಕಳ ಶಾಲೆಯ ಹಿತದೃಷ್ಠಿಯಿಂದ ಅನ್ವಿತಾರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಬೆಳಿಗ್ಗೆಯಿಂದ ಎಲ್ಲ ವಿದ್ಯಾರ್ಥಿಗಳು ಅನ್ವಿತಾ ಶಿಕ್ಷಕಿಗಾಗಿ ಉಪವಾಸ ಕುಳಿತಿರುವುದರ ಜೊತೆಗೆ ಅವರೇ ಬೇಕು ಎಂದು ಅಳುತ್ತಿದ್ದ ದೃಶ್ಯ ಕಂಡುಬಂದಿತು.

ಬಿಇಒ ಆರ್.ಪಿ ಚೇತನ ಸ್ವಷ್ಟನೆ :

ಬೆಳಿಗ್ಗೆಯಿಂದ ವಿದ್ಯಾರ್ಥಿಗಳು ಉಪವಾಸ ಕುಳಿತಿರುವುದನ್ನು ಮನಗಂಡ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಯದ ಆರ್.ಪಿ ಚೇತನ ಸ್ವಷ್ಟನೆ ನೀಡಿದ್ದು, ಸರ್ಕಾರದ ಶಿಕ್ಷಣ ಇಲಾಖೆಯ ಆದೇಶ ಎಲ್ಲ ಅಧಿಕಾರಿಗಳು ಪಾಲಿಸಲೇಬೇಕು. ಆದರೂ ಮಕ್ಕಳ ಹಿತದೃಷ್ಠಿಯಿಂದ ಹೆಚ್ಚುವರಿ ಶಿಕ್ಷಕಿಯಾದ ಅನ್ವಿತಾರನ್ನು ಹೆಚ್ಚುವರಿಯಾಗಿ ಹೋಗುವ ಸಂದರ್ಭದಲ್ಲಿ ಶಿಕ್ಷಕರ ಕೊರತೆಯನ್ನು ಮನಗಂಡು ಒಬ್ಬ ಶಿಕ್ಷಕರ ನಿಯೋಜನೆಯನ್ನು ಮೇಲಾಧಿಕಾರಿಗಳ ಆದೇಶದ ಮೆರೆಗೆ ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಳುಹಿಸಿಕೊಡಲು ಶಿಫಾರಸ್ಸು ಮಾಡುತ್ತೇವೆಂದು ಭರವಸೆ ನೀಡಿದ ಮೇಲೆ ಧರಣಿಯನ್ನು ಕೈ ಬೀಡಲಾಯಿತ್ತು.

ಈ ಧರಣಿ ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಸದಸ್ಯರಾದ ರಮೇಶ್, ಪ್ರಸಾಂತ್, ಲಕ್ಷ್ಮೀಶ, ಶೇಖರಪ್ಪ, ಚಂದ್ರಶೇಖರ, ವೇದಾವತಿ, ರಮೇಶ್, ಮಲ್ಲಪ್ಪಗೌಡ, ಇಂದಿರಮ್ಮ, ಅಶೋಕ, ಚೈತ್ರಾ, ಜ್ಯೋತಿ, ಇಂದಿರಾ, ವೆಂಕಟೇಶ್ ಹಾಗೂ ಆನೆಗದ್ದೆ ಶಾಲೆಯ 41 ವಿದ್ಯಾರ್ಥಿಗಳು ಭಾಗವಹಿಸದ್ದರು.

Leave a Comment