Hosanagara

ಹೊಂಬುಜದಲ್ಲಿ ಪ್ರಥಮ ಶ್ರಾವಣ ಶುಕ್ರವಾರ | ಶ್ರದ್ಧಾ ಭಕ್ತಿಯ ಧರ್ಮ ನಿಷ್ಠೆಯಿಂದ ಇಷ್ಟಾರ್ಥ ಪ್ರಾಪ್ತಿ ; ಶ್ರೀಗಳು

InShot 20260814 213009146

ಹೊಸನಗರ : ಭಾರತೀಯ ಸನಾತನ ಧರ್ಮ ಪರಂಪರೆಯ ಜನಸಮುದಾಯವನ್ನು ಧಾರ್ಮಿಕ ಪ್ರಜ್ಞೆ ಬೆಳೆಸುವಂತೆ ಪ್ರೇರೇಪಿಸುತ್ತದೆ. ಜೈನ ಧರ್ಮ ಶಾಸ್ತ್ರದನ್ವಯ ಪರ್ವದಿನಗಳಲ್ಲಿ ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಸಮರ್ಪಿಸಿದಾಗ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅಚಲವಾದುದು” ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಅನುಗ್ರಹ ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರಥಮ ಸಂಪತ್ ಶುಕ್ರವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಊರ ಪರವೂರ ಭಕ್ತರನ್ನುದ್ದೇಶಿಸಿ “ತ್ರಿಕರಣಪೂರ್ವಕ ದೇವರ ಪೂಜೆ ಸಲ್ಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆತು, ಜೀವನದಲ್ಲಿ ಯಶಸ್ಸು ಲಭಿಸುತ್ತದೆ” ಎಂದು ಶ್ರೀಗಳು ಆಶೀರ್ವದಿಸಿದರು.

ಸಾಗರ ಮನೆಯ ಹಿತ್ತಲಲ್ಲಿ ಕಡಜದ ಹುಳು ದಾಳಿ: 8 ವರ್ಷದ ಬಾಲಕ ಸಾವು – sagara

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಆಗಮೋಕ್ತ ವಿಧಾನಗಳು ನೆರವೇರಿದವು. ಪೂರ್ವಪರಂಪರೆಯಂತೆ ಭಕ್ತರು ಉಡಿ-ಸೀರೆ ಸಮರ್ಪಿಸಿ ಧನ್ಯರಾದರು.

ಉಪಹಾರ ಹಾಗೂ ಭೋಜನ ದಾನಿಗಳಾದ ಮುಂಬೈನ ಮುಖೇಶ್ ಅಮೃತ್‌ಲಾಲ್ ಶಹಾ ಸಂಗೀತ ಮುಖೇಶ ಶಹಾ ಕುಟುಂಬದವರು ತಮ್ಮ ಸೇವೆಯನ್ನು ಅರ್ಪಿಸಿದರು. ಶರ್ಕರ ವ್ಯಂಜನಗಳನ್ನು ಭಕ್ತರು ಸಮರ್ಪಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>