ಹೊಸನಗರ ; ಮಾಜಿ ಮುಖ್ಯಮಂತ್ರಿಯಾಗಿ ಜನಸೇವೆ ರೈತರ ಪರ ಹೋರಾಟ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕವೇ ರಾಜಕೀಯ ಪ್ರವೇಶ ಪಡೆದವರು ಎಂದು ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಹೇಳಿದರು.
ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ಹಂಚಿ ಸಾರ್ವಜನಿಕ ಆಸ್ವತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಿಸಿ ಮಾತನಾಡಿದ ಅವರು, ಸುಮಾರು 45 ವರ್ಷಗಳ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪನವರು ಒಬ್ಬರೇ ಬಿಜೆಪಿಯಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದು ಇವರ ನಾಯಕತ್ವದ ಗುಣ ಹಾಗೂ ಹೋರಾಟದ ಛಲದಿಂದ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಅಧಿಕಾರ ನಡೆಸಲು ಸಹಕಾರಿಯಾಯಿತು. ಇಂಥ ಧೀಮಂತ ನಾಯಕರ ಹುಟ್ಟುಹಬ್ಬ ಆಚರಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ದೀರ್ಘ ಕಾಲ ಇವರಿಗೆ ದೇವರು ಆಯಸ್ಸು ನೀಡುವುದರ ಜೊತೆಗೆ ಬಿಜೆಪಿ ಪಕ್ಷ ಬೆಳೆಸುವ ಕಾರ್ಯಕ್ಕೆ ಮುಂದಾಗಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಕೆ.ವಿ. ಕೃಷ್ಣಮೂರ್ತಿ, ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಸುರೇಶ್ ಸ್ವಾಮಿರಾವ್, ಹಾಲಗದ್ದೆ ಉಮೇಶ್, ಎನ್.ಆರ್. ದೇವಾನಂದ್, ಶ್ರೀಪತಿರಾವ್, ಮಂಡಾನಿ ಮೋಹನ್, ಮಂಜುನಾಥ್ ಸಂಜೀವ, ಎಸ್.ಹೆಚ್. ನಿಂಗಮೂರ್ತಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸತ್ಯನಾರಾಯಣ.ವಿ, ಕಾವೇರಿ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ಚಾಲುಕ್ಯ ಬಸವರಾಜ್, ಮಂಜುನಾಥ್, ಮನು ಇನ್ನೂ ಮುಂತಾದವರು ಉಪಸ್ಥಿತರಿದ್ದರು.