ಹೊಸನಗರ ; ಉಳುವವನೇ ಹೊಲದೊಡೆಯ ಕಾಗೋಡು ರೈತ ಚಳುವಳಿ ನೆಡೆದು 75 ವಸಂತಗಳು ಸಂದ ಹಿನ್ನೆಲೆಯಲ್ಲಿ ಅಂದಿನ ಚಳುವಳಿಯ ನೇತಾರ ದಿವಂಗತ ಡಾ.ಹೆಚ್. ಗಣಪತಿಯಪ್ಪ ಅವರ ಸ್ಮರಣಾರ್ಥ ಸಾಗರದ ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ (ರಿ) ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮಹನೀಯರಿಗೆ ನಿರಂತರವಾಗಿ ನೀಡುತ್ತ ಬಂದಿರುವ ‘ಡಾ. ಹೆಚ್. ಗಣಪತಿಯಪ್ಪ ನೇಗಲ ಯೋಗಿ’ 2026ನೇ ಸಾಲಿನ ರಾಜ್ಯ ಮಟ್ಟದ ‘ಡಾ. ಹೆಚ್. ಗಣಪತಿಯಪ್ಪ ನೇಗಿಲ ಯೋಗಿ’ ಪ್ರಶಸ್ತಿಗೆ ಹೊಸನಗರ ತಾಲೂಕಿನ ಸೊನಲೆ ಗ್ರಾಮ ವಾಸಿ 95 ವಯೋಮಾನದ ರಾಜ್ಯದ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಶಾಸಕ ಬಿ.ಸ್ವಾಮಿರಾವ್ ಆಯ್ಕೆಯಾಗಿದ್ದಾರೆ.
ಶೀಘ್ರದಲ್ಲೇ ಸಾಗರ ಪಟ್ಟಣದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಟ್ರಸ್ಟ್ ಹಸ್ತಾಂತರ ಮಾಡಲಿದೆ ಎಂದು ಟ್ರಸ್ಟ್‌ನ ಮೂಲಗಳು ತಿಳಿಸಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

