ಕಾಲುಸಂಕ ನಿರ್ಮಾಣಕ್ಕೆ ಬೇಳೂರಿಂದ ಶಂಕುಸ್ಥಾಪನೆ | ಅಕ್ರಮ ಮದ್ಯ ಮಾರಾಟ ವಿರೋಧಿಸಿ ಶಾಸಕರಿಗೆ ಸ್ವಸಹಾಯ ಸಂಘದ ಮಹಿಳೆಯರಿಂದ ಮನವಿ ಸಲ್ಲಿಕೆ

Written by malnadtimes.com

Published on:

RIPPONPETE ; ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕ ನಿರ್ಮಾಣಕ್ಕೆ ಸರ್ಕಾರದಿಂದ 17 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಈ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಮುಳುಗಡೆ ರೈತರೆ ಹೆಚ್ಚು ವಾಸಿಸುತ್ತಿರುವ ಈ ಗ್ರಾಮಗಳಿಗೆ ಸರಿಯಾದ  ಸಂಪರ್ಕ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಹಳ್ಳ ದಾಟಿಕೊಂಡು ಬರುವುದು ಕಷ್ಟಕರವಾಗಿತು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ದೂರದ ಬೆಳ್ಳೂರು, ರಿಪ್ಪನ್‌ಪೇಟೆ, ಅರಸಾಳು, ಶಿವಮೊಗ್ಗ ಹೋಗಿಬರಲು ಈ ಹಳ್ಳ ದಾಟಿ ಬರಬೇಕಾದ ಅನಿರ್ವಾತೆ ಇದ್ದು ಬಹು ವರ್ಷದ ಬೇಡಿಕೆಯಂತೆ ನಾನು ಶಾಸಕನಾದ ಮೇಲೆ ಸರ್ಕಾರದಿಂದ 17 ಲಕ್ಷ ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಆ ಕಾಮಗಾರಿ ಸುಸಜ್ಜಿತವಾಗಿ ಶೀಘ್ರದಲ್ಲಿ ಪೂರ್ಣಗೊಳಿಸಿ ಓಡಾಡಕ್ಕೆ ಅನುಕೂಲ ಕಲ್ಪಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್, ಎಪಿಎಂ.ಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಬೆಳ್ಳೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಎಂ.ಯೋಗೀಶ್, ಅವಡೆ ಶಿವಪ್ಪ, ಶ್ರೀಧರ, ಡಿ.ಈ.ಮಧುಸೂಧನ್, ಸಣ್ಣಕ್ಕಿ ಮಂಜು, ಉಂಡುಗೋಡು ನಾಗಪ್ಪ, ಕಟ್ಟೆನಾಗಪ್ಪ, ಆಸಿಫ್, ರವೀಂದ್ರ ಕೆರೆಹಳ್ಳಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


ಅಕ್ರಮ ಮದ್ಯ ಮಾರಾಟ ವಿರೋಧಿಸಿ ಶಾಸಕರಿಗೆ ಸ್ವಸಹಾಯ ಸಂಘದ ಮಹಿಳೆಯರಿಂದ ಮನವಿ ಸಲ್ಲಿಕೆ

RIPPONPETE ; ಬೆಳ್ಳೂರು, ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಕ್ಷಣ ತಡೆಹಿಡಿಯುವ ಮೂಲಕ ಗ್ರಾಮದಲ್ಲಿ ಮದ್ಯ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಹಾರೋಹಿತ್ತಲು, ಮತ್ತಲಿಜಡ್ಡು, ಗುಬ್ಬಿಗಾ, ಗುಳಿಗುಳಿಶಂಕರ ಸ್ವಸಹಾಯ ಸಂಘದ ಮಹಿಳೆಯವರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಮನವಿ ಮೂಲಕ ಆಗ್ರಹಿಸಿದರು.

ಮಹಿಳೆಯರ ಮನವಿ ಸ್ವೀಕರಿಸಿ ತಕ್ಷಣ ಸ್ಥಳದಲ್ಲಿದ್ದ ಪಿಎಸ್‌ಐ ಪ್ರವೀಣ್ ಎಸ್.ಪಿ.ಯವರಿಗೆ ಇಂದಿನಿಂದಲೇ ಯಾವ-ಯಾವ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪತ್ತೆ ಮಾಡಿ ಕ್ರಮ ಕೈಗೊಳ್ಳುವುದರೊಂದಿಗೆ ಮದ್ಯ ಮಾರಾಟವನ್ನು ತಡೆಹಿಡಿಯಲು ಶಾಸಕರು ಸೂಚಿಸಿದರು.

Leave a Comment