ತೀರ್ಥಹಳ್ಳಿ: 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ “ಎಲೆ ಚುಕ್ಕಿ ರೋಗ ನಿಯಂತ್ರಣ ಕಾರ್ಯಕ್ರಮ”ದ ಅಡಿಯಲ್ಲಿ, ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ‘ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ – AMC’ (ಸೂಕ್ಷ್ಮಾಣು ಜೀವಿಗಳ ಸಮೂಹ) ವನ್ನು ಉಚಿತವಾಗಿ ವಿತರಿಸಲು ತೋಟಗಾರಿಕೆ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.
ತಾಲ್ಲೂಕಿನ ಎಲ್ಲಾ ವರ್ಗದ ರೈತರು ಈ ಯೋಜನೆಯ ಸದುಪಯೋಗ ಪಡೆಯಲು ಅವಕಾಶವಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿ ಎಕರೆ ಅಡಿಕೆ ತೋಟಕ್ಕೆ ಗರಿಷ್ಠ 600 ರೂ. ಮೊತ್ತದಂತೆ, ಒಬ್ಬ ಫಲಾನುಭವಿಯು ಗರಿಷ್ಠ 5 ಎಕರೆ ಕ್ಷೇತ್ರಕ್ಕೆ ಒಟ್ಟು 3000 ರೂ. ಮೌಲ್ಯದ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ರೈತರು ಸಲ್ಲಿಸುವ ಅರ್ಜಿಗಳ ಜೇಷ್ಠತೆ ಹಾಗೂ ವರ್ಗವಾರು ಲಭ್ಯವಿರುವ ಪ್ರಮಾಣದ ಅನುಸಾರವಾಗಿ ಇದನ್ನು ವಿತರಿಸಲಾಗುವುದು ಎಂದು ತೀರ್ಥಹಳ್ಳಿ (ಜಿ.ಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಆಸಕ್ತ ರೈತರು ತೀರ್ಥಹಳ್ಳಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ದಿನಾಂಕ 13-11-2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು:
- ನಿಗದಿತ ಅರ್ಜಿ ನಮೂನೆ.
- 01-04-2026ರ ನಂತರದ ಪಹಣಿ/RTC (ಇದರಲ್ಲಿ ಅಡಿಕೆ ಬೆಳೆ ನಮೂದಾಗಿರಬೇಕು. ಒಂದುವೇಳೆ ಬೆಳೆ ನಮೂದಾಗಿರದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು).
- ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ (ಮುಖ ಪುಟ).
- ಪಹಣಿ (RTC) ಜಂಟಿ ಖಾತೆಯಾಗಿದ್ದಲ್ಲಿ, 100 ರೂ.ಗಳ ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ ಸಲ್ಲಿಸುವುದು (ನೋಟರಿ ಕಡ್ಡಾಯ).
- SC/ST ವರ್ಗದ ಫಲಾನುಭವಿಗಳಾಗಿದ್ದಲ್ಲಿ, RD ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರೈತರು ಹೆಚ್ಚಿನ ವಿವರಗಳಿಗಾಗಿ ಕುಶಾವತಿಯಲ್ಲಿರುವ ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಅಥವಾ ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
- ಕಸಬಾ ಹೋಬಳಿ: ದಿನೇಶ ಟಿ. ಕೆ – 9448751947
- ಆಗುಂಬೆ ಮತ್ತು ಅಗ್ರಹಾರ ಹೋಬಳಿ: ಲಕ್ಷ್ಮೀಕಾಂತ್ ಕೆ. ಹೆಚ್ – 9482960857
- ಮಂಡಗದ್ದೆ ಹೋಬಳಿ: ಮಧುಕರ ಕೆ. ಎಲ್ – 8296510018
- ಮುತ್ತೂರು ಹೋಬಳಿ: ಕಾವ್ಯ ಜಿ – 8277160164
- ತೀರ್ಥಹಳ್ಳಿ ತಾಲ್ಲೂಕು: ಸೋಮಶೇಖರ ಕೆ – 9108280642

