ಶಿವಮೊಗ್ಗ ; ಬಾಲಕಿಯೊಬ್ಬಳು ಜೋಕಾಲಿ ಆಡುವಾಗ ಪಂಚೆ ಕುತ್ತಿಗೆಗೆ ಬಿಗಿದು ಮೃತಪಟ್ಟ ಘಟನೆ ನಗರದ ಹೊರವಲಯದ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗ ವಿದ್ಯಾನಗರದ ಪ್ರಣಮ್ಯ (09) ಮೃತ ಬಾಲಕಿ. ಈಕೆ ಬೇಸಿಗೆ ರಜೆಗಾಗಿ ಚಿಕ್ಕಮ್ಮನ ಮನೆಗೆ ಲಕ್ಕಿನಕೊಪ್ಪಕ್ಕೆ ತೆರಳಿದ್ದಳು. ಕೋಣೆಯಲ್ಲಿ ಪಂಚೆಯಲ್ಲಿ ಜೋಕಾಲಿ ಕಟ್ಟಿ ಆಟವಾಡುತ್ತಿದ್ದಳು. ಈ ವೇಳೆ ಕುತ್ತಿಗೆಗೆ ಬಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬಹಳ ಹೊತ್ತಾದರೂ ಬಾಲಕಿ ಧ್ವನಿ ಕೇಳದ ಹಿನ್ನಲೆಯಲ್ಲಿ ಚಿಕ್ಕಮ್ಮ ಕೋಣೆಗೆ ಹೋಗಿ ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

