ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ; ಮಳಲಿ ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಓದಿನೊಂದಿಗೆ ಹೆಚ್ಚು ಅಂಕ ಗಳಿಸುವಂತೆ ಪೋಷಕರು ಶಿಕ್ಷಕರು ಒತ್ತಡ ಹಾಕದ ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕ ಪೋಷಕರದಾಗಬೇಕು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೆದ್ದಾರಿಪುರ ಗ್ರಾಮದಲ್ಲಿನ ಶ್ರೀ ಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಪೂರ್ವ ಪ್ರಾಥಮಿಕ ಹಿರಿಯ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವುದರೊಂದಿಗೆ ಗುರು-ಹಿರಿಯರನ್ನು ತಂದೆ-ತಾಯಿಯರನ್ನು ಪ್ರೀತಿಸಿ ಗೌರವಿಸುವಂತೆ ಮಾಡುವ ಹೊಣೆ ಶಿಕ್ಷಕ ಪೋಷಕರದ್ದಾಗಬೇಕು ಎಂದರು.

ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಹಾಗೂ ಜಿಲ್ಲಾ ಮಹಿಳೆ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಆರ್.ಬಂಡಿ, ಪ್ರತಿಭಾ ಪುರಸ್ಕಾರ ವಿತರಿಸಿದರು.

ಶಿವರಾಮಕೃಷ್ಣ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅವರ್ನೆಸ್ ಸಂಸ್ಥಾಪಕ ಸಿ.ಕೆ.ಶಿವರಾಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಶಾಲಾ ಸಲಹಾ ಸಮಿತಿ ಅಧ್ಯಕ್ಷ ಚಂದಪ್ಪಗೌಡ, ಉಪಾಧ್ಯಕ್ಷ ಪ್ರಸನ್ನ ಕೊಳವಳ್ಳಿ, ಕಾರ್ಕಳ ಕ್ರಿಯೇಟಿವ್ ಪ್ರತಿಷ್ಟಾನ ಸಂಸ್ಥಾಪಕ ಎಸ್.ಎಲ್.ಆಶ್ವತ್, ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಹೆದ್ದಾರಿಪುರ ಗ್ರಾಮ ಪಂಚಾಯಿತ್ ಸದಸ್ಯ ಹೆಚ್.ಕೆ.ನಾಗರಾಜ್, ಕೆಂಚನಾಲ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ನಾಗೇಶ್, ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ, ಕೆಂಚನಾಲ ಗ್ರಾಮ ಪಂಚಾಯಿತ್ ಸದಸ್ಯ ಕೃಷ್ಣೋಜಿರಾವ್, ಜಿ.ಜಿ.ಸದಾನಂದ ಜಂಬಳ್ಳಿ, ಉಪಾಧ್ಯಕ್ಷೆ ಅಪೂರ್ವ ಹಾಗೂ ಮುಖ್ಯ ಶಿಕ್ಷಕಿ ವಿನುತ ಇನ್ನಿತರರು ಭಾಗವಹಿಸಿ ಮಾತನಾಡಿದರು.

ವಿನಾಯಕ ಸ್ವಾಗತಿಸಿದರು. ತಜ್ಮೀಯಾ ಅನುಶ್ರೀ ನಿರೂಪಿಸಿದರು. ವಿದ್ಯಾ ವಾರ್ಷಿಕ ವರದಿ ವಾಚನ ಮಾಡಿದರು. ರಶ್ಮಿ ವಂದಿಸಿದರು.

Leave a Comment