ಶ್ರಾವಣ ಶುಕ್ರವಾರ ಪ್ರಯುಕ್ತ ಹೊಂಬುಜ ಪದ್ಮಾವತಿ ದೇವಿಗೆ ಸ್ವರ್ಣಾಲಂಕಾರ | ಧಾರ್ಮಿಕ ಭಕ್ತಿಭಾವ, ಶ್ರದ್ಧೆಯಿಂದ ಜೀವನೋಲ್ಲಾಸ ; ಶ್ರೀಗಳು

Written by Mahesh Hindlemane

Published on:

ರಿಪ್ಪನ್‌ಪೇಟೆ ; ಶ್ರಾವಣ ಮಾಸದ ದ್ವಿತೀಯ ಶುಕ್ರವಾರದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಊರ ಪರವೂರ ಭಕ್ತರು ಉಡಿ-ಸೀರೆ-ಕಾಣಿಕೆ-ದ್ರವ್ಯಗಳನ್ನು ಅರ್ಪಿಸಿ ಇಷ್ಟಾರ್ಥ ಲಭಿಸಲೆಂದು ಪ್ರಾರ್ಥಿಸಿಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

“ಸರ್ವರಲ್ಲಿಯೂ ಧಾರ್ಮಿಕ ಅಸ್ಮಿತತೆ ಬೆಳೆಯಬೇಕು. ಧಾರ್ಮಿಕ ಭಕ್ತಿಭಾವ, ಶ್ರದ್ಧೆಯಿಂದ ಪೂಜೆ-ಕಾಣಿಕೆ ಸಮರ್ಪಣೆಯಿಂದ ಮಾನಸಿಕ ಕ್ಷೋಭೆ ದೂರವಾಗಿ ಜೀವನೋಲ್ಲಾಸ ವರ್ಧಿಸುತ್ತದೆ” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಗಳವರು ವಿಶೇಷ ಸ್ವರ್ಣಾಲಂಕಾರ ಪೂಜೆಯ ಬಳಿಕ ಭಕ್ತರನ್ನು ಹರಸಿ ಆಶೀರ್ವದಿಸಿದರು.

ವಿವಿಧ ಫಲ-ಪುಷ್ಪ-ಸಿಹಿ ನೈವೇದ್ಯಗಳನ್ನು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತರು ಸ್ವಸ್ತಿಶ್ರೀಗಳ ಉಪಸ್ಥಿತಿಯಲ್ಲಿ ಅರ್ಪಿಸಿ ಧನ್ಯರಾದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಶ್ರೀಕ್ಷೇತ್ರಪಾಲರ ಸಾನಿಧ್ಯದಲ್ಲಿ ಜಿನಾಗಮೋಕ್ತ ಶಾಸ್ತçದಂತೆ ಪೂಜಾ ವಿಧಿಗಳು ನೆರವೇರಿದವು. ಅನ್ನಪ್ರಸಾದ ವ್ಯವಸ್ಥೆ, ವಸತಿ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ಕಲ್ಪಿಸಲಾಗಿತ್ತು.

Leave a Comment