ಹೊಸನಗರ

ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು ; ತಹಸೀಲ್ದಾರ್ ಭರತ್‌ರಾಜ್

ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು ; ತಹಸೀಲ್ದಾರ್ ಭರತ್‌ರಾಜ್ – InShot 20260801 211951126

ಹೊಸನಗರ ; ಸರ್ಕಾರಿ ನೌಕರ ವರ್ಗದವರು ನೌಕರಿಯಲ್ಲಿರುವಷ್ಟು ದಿನಗಳ ಕಾಲ ಶ್ರದ್ಧ ಮನಸ್ಸಿನಿಂದ ಸಾರ್ವಜನಿಕರು ಕಛೇರಿಗೆ ಬಂದಾಗ ಸಾಧ್ಯವಾದರೇ ಕಾನೂನಿನ ಅಡಿಯಲ್ಲಿ ಸರಿಯಿದ್ದರೆ ಅವರ ಕೆಲಸ ಮಾಡಿಕೊಡಿ ಇಲ್ಲವಾದರೆ ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಿ ಕಳುಹಿಸಿಕೊಡಿ ಎಂದು ಹೊಸನಗರದ ತಹಸೀಲ್ದಾರ್ ಭರತ್‌ರಾಜ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ವಯೋ ನಿವೃತ್ತಿ ಪಡೆದ ಇಂದಿರಾ, ಹೊಸನಗರ ಗ್ರೇಡ್2 ತಹಸೀಲ್ದಾರ್‌ರಾಗಿ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಹೆಬ್ರಿ ತಹಸೀಲ್ದಾರ್‌ರಾಗಿ ವರ್ಗಾವಣೆಗೊಂಡಿರುವ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಹೊಸನಗರ ಕಂದಾಯ ಇಲಾಖೆಯಲ್ಲಿ ಶಿರಾಸ್ಥೆದಾರ್‌ರಾಗಿ ಸೇವೆ ಸಲ್ಲಿಸುತ್ತಿದ್ದ ಸುಧೀಂದ್ರ ಕುಮಾರ್‌ ಗ್ರೇಡ್2 ತಹಸೀಲ್ದಾರ್‌ರಾಗಿ ಬಡ್ತಿ ಹೊಂದಿದ್ದು ಇವರನ್ನು, ನಗರ ನಾಡ ಕಛೇರಿಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುರೇಶ್‌, ಭದ್ರಾವತಿಗೆ ವರ್ಗಾವಣೆ ಹೊಸನಗರ ತಾಲ್ಲೂಕಿನಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಶಿವಮೊಗ್ಗ ತಾಲ್ಲೂಕಿಗೆ ವರ್ಗಾವಣೆಗೊಂಡಿರುವ ಸಿದ್ಧಪ್ಪ ಚೂರೇರ, ಕಸಬಾ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಲೋಹಿತ್ ಹಾಗೂ ಅನುಷಾರವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸುವ ಸಂದರ್ಭದಲ್ಲಿ ಮಾತನಾಡಿದರು.

ಸರ್ಕಾರಿ ಕೆಲಸವೆಂದರೆ ಒಂದು ಕಡೆಯಿಂದ ಇನೊಂದು ಊರಿಗೆ ವರ್ಗಾವಣೆಯಾಗುವುದು ಸಹಜ ಪ್ರಕ್ರಿಯೆ ಅದನ್ನು ತಡೆಯಲು ಯಾರಿಂದಲ್ಲೂ ಸಾಧ್ಯವಿಲ್ಲ. ನಾವೂ ಯಾವ ಊರಿನಲ್ಲಿ ಇರುತ್ತೇವೋ ಅಷ್ಟು ದಿನಗಳ ಕಾಲ ಸರ್ಕಾರಿ ಕೆಲಸ ದೇವರ ಕೆಲಸವೆಂದು ತಿಳಿದು ಕೆಲಸ ಮಾಡಬೇಕು. ಸರ್ಕಾರ ನಮಗೆ ಸರ್ಕಾರಿ ಸೇವೆ ಮಾಡಿ ಜನರಿಗೆ ಅನುಕೂಲ ಮಾಡಿ ಎಂದು ಸಂಬಳ ನೀಡಿ ಕಳುಹಿಸಿದ್ದಾರೆ. ನಾವು ಮಾಡುವ ಕೆಲಸ ಶ್ರದ್ಧಾ ಪೂರ್ವಕವಾಗಿರಬೇಕು. ನಮ್ಮಿಂದ ನೂರಾರು ಜನರಿಗೆ ಕಾನೂನಿನ ಅಡಿಯಲ್ಲಿ ಅನುಕೂಲಕರವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ನಾವು ಮಾಡುವ ಕೆಲಸ ನಮಗೆ ಇಷ್ಟವಿಲ್ಲದಂತೆ ಯಾರಿಗೊ ಅನುಕೂಲಕರವಾಗಿ ಆಮಿಷಗಳಿಗೆ ಬಲಿಯಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಅದರ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಬೀಳ್ಕೊಡುಗೆ :

ಇಂದಿರಾ ರವರು 35 ವರ್ಷ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದಿದ್ದು ಇವರನ್ನು ಹೊಸನಗರದ ತಹಸೀಲ್ದಾರ್ ಭರತ್‌ರಾಜ್‌ ಕಂದಾಯ ಇಲಾಖೆಯ ವಾಹನದಲ್ಲಿ ಅವರ ಮನೆಯವರೆಗೆ ಬಿಡುವ ಮೂಲಕ ಬೀಳ್ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಚುನಾವಣೆ ಶಿರಾಸ್ಥೆದಾರ್ ಸತೀಶ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್, ರಾಜ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಕೌಶಿಕ್, ರೇಣುಕಯ್ಯ, ದೀಪು, ಶಿಲ್ಪಾ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಹಾಗು ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]