RIPPONPETE ; ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪದವಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಗೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉತ್ತಮ ಅವಕಾಶವಿದೆ. ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಹತೆ ಹೊಂದಿ ವಿದೇಶದಲ್ಲಿಉದ್ಯೋಗ ಪಡೆಯುವವರಿಗೆ ವಿದೇಶದಲ್ಲಿ ಕಾರ್ಪೆಟ್ ಹಾಕಿ ಅಹ್ವಾನಿಸುತ್ತಿದ್ದಾರೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ 2024-25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಯುವ ಸಮೂಹ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ನೀಡಬೇಕು. ಕಠಿಣ ಪರಿಶ್ರಮ ಮತ್ತು ಅಧ್ಯಯನದ ಮೂಲಕ ಉತ್ತಮ ಅಂಕಗಳನ್ನು ಗಳಿಸಿ, ಉನ್ನತ ಉದ್ಯೋಗವನ್ನು ಅಲಂಕರಿಸಿ ದೇಶದ ಅಭಿವೃದ್ಧಿಗೆ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಮಾತ್ರ ವಿದ್ಯಾರ್ಥಿಗಳು ಪಡೆದುಕೊಂಡ ಶಿಕ್ಷಣಕ್ಕೆ ಮಹತ್ವ ಬಂದಂತಾಗುತ್ತದೆ ಯಾವುದೇ ವಿದ್ಯಾರ್ಥಿ ವ್ಯಾಸಂಗದಿಂದ ವಂಚಿತರಾಗದಂತೆ ಉಪನ್ಯಾಸಕ ವೃಂದ ಗಮನಹರಿಸಿ ಅವರನ್ನು ಕಾಲೇಜ್‌ಗೆ ಕರೆತರುವ ಕೆಲಸ ಮಾಡುವಂತೆ ತಿಳಿಸಿದರು.
ಇಂದಿನ ಯುವ ವಿದ್ಯಾರ್ಥಿಗಳು ಮೂಡನಂಬಿಕೆಯಿಂದ ಮುಗ್ದ ಜನರನ್ನು ವಂಚಿಸುವವರು ಹೆಚ್ಚಾಗಿದ್ದು ಅವರುಗಳಿಗೆ ಅವಕಾಶ ನೀಡದೆ ಸ್ವಚ್ಚತೆಯಕಡೆ ಹೆಚ್ಚು ಒತ್ತು ನೀಡಬೇಕು ಎನ್.ಎಸ್.ಎಸ್.ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದ ಅವರು ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವದಿಂದ ಕಾಣುವಂತೆ ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿಯ ಪ್ರಾಚಾರ್ಯ ಪ್ರೊ. ಬಿ. ಜಿ. ಧನಂಜಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತಿದೆ. ಪಾಠ ಪ್ರವಚನಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರ ಜೊತೆಗೆ ಪದವಿಯ ನಂತರ ಉದ್ಯೋಗ ಅವಕಾಶಗಳನ್ನು ಪಡೆಯುವುದರ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪದವಿ ಶಿಕ್ಷಣದಲ್ಲಿ ಅರಿವನ್ನು ಮೂಡಿಸಿಕೊಳ್ಳುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ವಿವಿಧ ಉದ್ಯೋಗಗಳಲ್ಲಿ ಉದ್ಯೋಗಿಗಳಾಗಿ ಅವಕಾಶವನ್ನು ಪಡೆದು ಕೊಂಡಾಗ ಮಾತ್ರ ವಿದ್ಯಾರ್ಥಿಗಳು ಪಡೆದುಕೊಂಡ ಶಿಕ್ಷಣಕ್ಕೆ ಗೌರವ ದೊರಕಿದಂತಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಲು ಕಾರಣ ಭೂತರಾದ ಉಪನ್ಯಾಸಕ ವರ್ಗ ಹಾಗೂ ಪೋಷಕರಿಗೆ ಸಂತಸವಾಗುತ್ತದೆ, ಆ ದಿಸೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾಲೇಜ್ ಪ್ರಾಚಾರ್ಯ ಡಾ. ಹೆಚ್ ಎಸ್ ವಿರೂಪಾಕ್ಷಪ್ಪ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿ ಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪಿಯೂಸ್ ರೋಡ್ರಿಗಸ್, ಮಂಜುನಾಥ್ ಕಾಮತ್, ಹರ್ಷ ರಮೇಶ್ ಫ್ಯಾನ್ಸಿ, ಶ್ರೀನಿವಾಸ್ ಆಚಾರ್, ವಿಜಯೇಂದ್ರ, ರಾಘು, ಯೋಗೀಶ್ ಬೆಳ್ಳೂರು, ಅನಿಷಾ ಖಾದರ್, ಕಾಲೇಜಿನ ವಿವಿಧ ಘಟಕಗಳ ಅಧಿಕಾರಿಗಳಾದ ಪ್ರೊ. ರಾಜು. ಆರ್ ಕೆ, ಡಾ. ವಿದ್ಯಾ ಟಿ ಪವರ್, ಡಾ. ರವೀಶ್, ಡಾ. ಕುಮಾರ್, ರಾಜು ಬಿ.ಎಲ್ ನಯನ, ಡಾ. ರಜನಿಕಾಂತ್, ಹರ್ಷಕುಮಾರ್ ಕೆ. ಡಾ. ಸೌಮ್ಯ ಜಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು|| ಸಿಂಚನ, ಅಕ್ಷಯ್ ಕೆ.ಜಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಇನ್ನಿತರರು ಹಾಜರಿದ್ದರು.