ಗುಳ್ಳೆಕೊಪ್ಪ ಎಸ್. ರವಿಕುಮಾರ್ ರವರಿಗೆ ಕಲಾ ಕೌಸ್ತುಭ ಕನ್ನಡ ಸಂಘದಿಂದ ಸನ್ಮಾನ  | ಚುಕ್ಕಿ ಎಂ ಬ್ಯಾಣದ್’ಗೆ ಕಲಾಶ್ರೀ ಪ್ರಶಸ್ತಿ

Written by malnadtimes.com

Published on:

HOSANAGARA ; ತಾಲೂಕಿನ ರಿಪ್ಪನ್‌ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಹೊಸನಗರ ಮೂಲದ ಬೆಂಗಳೂರಿನ ಅಭಿವೃದ್ಧಿ ಎಲೆಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಕಾ ಸಂಸ್ಥೆಯ ಸಿಇಒ ಎಸ್. ರವಿಕುಮಾರ್ ಅವರ ಸಮಾಜಸೇವೆ ಪರಿಗಣಿಸಿ  ಪ್ರಶಸ್ತಿ ನೀಡಿ ಸಂಘ ಆತ್ಮೀಯವಾಗಿ ಸನ್ಮಾನಿಸಿತು. 

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ಕನ್ನಡ  ಪದಾಧಿಕಾರಿಗಳಾದ ಗುರುಮೂರ್ತಿ ಕೆರೆಹಳ್ಳಿ, ಸತೀಶ್ ಪೂಜಾರಿ,  ಶೈಲಾಪ್ರಭು, ಎಂ.ಬಿ. ಮಂಜುನಾಥ ಗೌಡ ಹಾಗು ಪಿಎಸ್ಐ ಪ್ರವೀಣ್ ಎಸ್.ಪಿ. ಸೇರಿದಂತೆ ಹಲವರು ಹಾಜರಿದ್ದರು.


ಚುಕ್ಕಿ ಎಂ ಬ್ಯಾಣದ್ ಗೆ ಕಲಾಶ್ರೀ ಪ್ರಶಸ್ತಿ :

HOSANAGARA ; ಇತ್ತೀಚೆಗೆ ಬೆಂಗಳೂರಿನಲ್ಲಿ ಜವಾಹರ ಬಾಲ ಭವನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿನಿ ಚುಕ್ಕಿ ಎಂ. ಬ್ಯಾಣದ ಸೃಜನಾತ್ಮಕ ಕಲಾ ಪ್ರದರ್ಶನ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಕಲಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ವಿತರಿಸಿದರು.

ಶಾಸಕರಾದ ರಿಜ್ವನ್ ಅರ್ಷಾದ್, ಕೋನ ರೆಡ್ಡಿ, ಮಂಜುಳಾ ಅರವಿಂದ್ ಲಿಂಬಾವಳಿ, ಕೋಲಾರ ಶಾಸಕ ಮಂಜುನಾಥ್, ಬಾಲ ಭವನ ಅಧ್ಯಕ್ಷ ನಾಯ್ಡು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment