ಹೊಸನಗರ ; ಗುರು ಪೂರ್ಣಿಮೆಯ ದಿನದಂದು ಗುರು-ಹಿರಿಯರನ್ನು ಗೌರವಿಸಿ ಸನ್ಮಾನ ಮಾಡುವುದರಿಂದ ಶುಭ ಫಲಗಳು ದೊರಕುತ್ತದೆ ಎಂದು ಹಿಂದಿನವರು ಹೇಳಿದ್ದಾರೆ ಅದನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಆಶಾ ರವೀಂದ್ರ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲದ ವತಿಯಿಂದ ಗುರುಪೂರ್ಣಿಮೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರದಲ್ಲಿ ಪ್ರಾಸ್ತಾವಿಕವಾಗಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯದರ್ಶಿ ಗಣಪತಿ ಬಿಳಗೋಡು ಮಾತನಾಡಿ, ನಮ್ಮ ಬಿಜೆಪಿ ಪಕ್ಷ ಹಿಂದಿನಿಂದಲೂ ಗುರು-ಹಿರಿಯರನ್ನು ಗೌರವಿಸುತ್ತಾ ಬಂದಿದ್ದು ಅದನ್ನು ಇಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಈ ಕಾರ್ಯಕ್ರದಲ್ಲಿ ರಾಮಕೃಷ್ಣ ಮಠದ ಶಾವೆಯ ಶಿಕ್ಷಕ ಸುಧಾಕರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಉಮೇಶ್ ಕಂಚುಗಾರ್, ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಜಿಲ್ಲಾ ಕಾರ್ಯಕಾರಣಿ ಸದಸ್ಯೆ ಶಶಿಕಲಾ ಅನಂತ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಮಾ ಸುರೇಶ್, ಕೃಷ್ಣವೇಣಿ, ಸವಿತಾ ರಮೇಶ, ಅನುಪಮಾ ಸುರೇಶ, ಸುಶೀಲ ಕೃಷ್ಣ, ಉಮೇಶ್, ಕಾರಣಗಿರಿ ಕಾವ್ಯ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.