ರಿಪ್ಪನ್ಪೇಟೆ ; ಇಲ್ಲಿನ ಹಿಂದೂ ಜಾಗರಣ ವೇದಿಕೆಯವರು ರಿಪ್ಪನ್ಪೇಟೆಯಲ್ಲಿ ಹರ್ಘರ್ ತಿರಂಗಾ ಬೈಕ್ ರ್ಯಾಲಿ ನಡೆಸಿ ಜನರಲ್ಲಿ ಜಾಗೃತಿಯ ಅರಿವು ಮೂಡಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ದೇಶದ ಸ್ವಾತಂತ್ರ್ಯದ ಮಹತ್ವ ತಿಳಿಸುವ ಮತ್ತು ತ್ರಿವರ್ಣ ಧ್ವಜದ ಕುರಿತು ಅರಿವು ಮೂಡಿಸಲು ಜನರಲ್ಲಿ ದೇಶಾಭಿಮಾನ ಬೆಳಸುವ ಉದ್ದೇಶದಿಂದ ಬೈಕ್ ರ್ಯಾಲಿ ನಡೆಸಿದರು.
ಇಲ್ಲಿನ ಸಿದ್ದಿವಿನಾಯಕ ದೇವಸ್ಥಾನದಿಂದ ಹೊರಟು ಶಿವಮೊಗ್ಗ – ತೀರ್ಥಹಳ್ಳಿ – ಹೊಸನಗರ – ಸಾಗರ ಪ್ರಮುಖ ರಸ್ತೆಯಲ್ಲಿ ನೂರಾರು ಬೈಕ್ಗಳ ಮೂಲಕ ರ್ಯಾಲಿ ತೆರಳಿ ನಂತರ ವಿನಾಯಕ ದೇವಸ್ಥಾನದ ಹಿಂಭಾಗದಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಸಂವಾದ ಮತ್ತು ದೇಶ ಭಕ್ತಿಯ ವಿಚಾರದ ಅರಿವು ಮೂಡಿಸಿ ಪ್ರತಿ ಮನೆಯ ಮೇಲೂ ದೇಶಭಕ್ತಿಗಾಗಿ ತಿರಂಗಾ ಬಾವುಟ ಹಾರಿಸುವಂತೆ ಕರೆ ನೀಡಿದರು.
ಹಿಂದು ಜಾಗರಣಾ ವೇದಿಕೆಯ ಪ್ರಮುಖ ಕುಷನ ದೇವರಾಜ್ ಕೆರೆಹಳ್ಳಿ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಮುರುಳಿ ಕೆರೆಹಳ್ಳಿ, ಎಂ.ಬಿ. ಮಂಜುನಾಥ, ಎಂ.ಸುರೇಶ್ಸಿಂಗ್, ಸುಧೀಂದ್ರ ಪೂಜಾರಿ, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್,ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.