HOSANAGARA | ಕಳೆದ ಮೂರು ದಿನಗಳಿಂದ ತಾಲ್ಲೂಕಿನದ್ಯಾಂತ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ಸಣ್ಣ-ಪುಟ್ಟ ಅನಾಹುತಗಳು ನಡೆದ ಬಗ್ಗೆ ವರದಿಯಾಗಿದೆ.
ಪಟ್ಟಣದ ಮಾರಿಗುಡ್ಡದ ಸರ್ವೆ ನಂಬರ್ 13ರಲ್ಲಿ ಸೋಮವಾರ ರಾತ್ರಿ ಗಾಳಿ ಮಳೆಗೆ ಚಂದ್ರಶೇಖರ ಗೌಡರವರ ಮಾಲಿಕತ್ವದ ನಿಲ್ಲಿಸಿದ್ದ ಪ್ರವಾಸಿ ಬಸ್, ಕೆ.ಇ.ಬಿ ಲೈನ್, ಕೇಬಲ್ ಲೈನ್ ಹಾಗೂ ಹಿರಿಯಣ್ಣನವರ ಮನೆಯ ಮೇಲೆ ಬೃಹತ್ ಗಾತ್ರದ ಅಕೇಶಿಯ ಮರ ಬಿದ್ದ ಪರಿಣಾಮ ಪ್ರವಾಸಿ ಬಸ್ ನಜ್ಜುಗುಜ್ಜಾಗಿದೆ.
ವಿದ್ಯುತ್ ಲೈನ್ ಸಂಪೂರ್ಣ ಕಟ್ ಆಗುವುದರ ಜೊತೆಗೆ ಟಿ.ವಿ ಕೇಬಲ್ ತುಂತಾಗಿದ್ದು ಮನೆಯ ಮೇಲ್ಭಾಗದಲ್ಲಿ ಪ್ಯಾರ್ ಪಿಟ್ ಸಂಪೂರ್ಣ ಜಖಂ ಆಗಿದ್ದು ಸುಮಾರು ಅಂದಾಜು 3 ಲಕ್ಷ ರೂ. ನಷ್ಟು ನಷ್ಟ ಉಂಟಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಭೇಟಿ, ಪರಿಶೀಲನೆ:
ತಹಶೀಲ್ದಾರ್ ರಶ್ಮಿ ಹಾಲೇಶ್‌ರವರ ಆದೇಶದ ಮೇರೆಗೆ ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಕ್ ಭೇಟಿ ನೀಡಿ ಸ್ಥಳ ಪರಿಶೀಲಸಿ ನಷ್ಟದ ಬಗ್ಗೆ ಅಂದಾಜಿಸಿ ಕಂದಾಯ ಇಲಾಖೆಗೆ ವರದಿ ನೀಡಿದ್ದಾರೆ.
ಹೊಸನಗರದಲ್ಲಿ ಸಾಕಷ್ಟು ಮರಗಳು ಮನೆಯ ಸುತ್ತ-ಮುತ್ತ ಸರ್ಕಾರಿ ಜಾಗದಲ್ಲಿದ್ದು ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಬಾರಿ ವರದಿ ಮಾಡಲಾಗಿದ್ದರೂ ಯಾವುದಕ್ಕೂ ಸ್ಪಂದಿಸಿದೇ ಇರುವುದರಿಂದ ಈ ರೀತಿ ಅನಾಹುತಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಭಾರೀ ಅನಾಹುತ ತಪ್ಪಿಸಬೇಕಾದರೆ ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ತುರ್ತು ಗಮನ ಹರಿಸಿ ಸರ್ಕಾರಿ ಜಾಗದಲ್ಲಿರುವ ಮರದ ಕೊಂಬೆಗಳನ್ನು ತೆಗೆಯದಿದ್ದರೆ ಇನ್ನೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು ತಕ್ಷಣ ಅಧಿಕಾರಿಗಳು ಸ್ಪಂದಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Read More
HOSANAGARA RAIN | ಕಳೆದ 24 ಗಂಟೆಗಳಲ್ಲಿ ಹುಲಿಕಲ್ಲಿನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ !
ಹೊಸನಗರ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ ಏನದು ?
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ! ಏನದು ?