ರಿಪ್ಪನ್‌ಪೇಟೆ ; ಬೆಳಗ್ಗೆಯಿಂದ ಉರಿಬಿಸಿಲಿನ ವಾತಾವರಣದಿಂದ ಸುಸ್ತಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ಇಂದು ಮಧ್ಯಾಹ್ನ ಸುಮಾರು 1:45 ರ ಸಮಯದಲ್ಲಿ ಏಕಾಏಕಿ ಸುರಿದ ಭಾರಿ ಗುಡುಗು ಸಿಡಿಲಬ್ಬರದ ಆಲಿಕಲ್ಲು ಮಳೆಯಿಂದಾಗಿ ರಸ್ತೆ ತುಂಬಾ ಮಲ್ಲಿಗೆ ಹೂವು ಚೆಲ್ಲಿದಂತಹ ದೃಶ್ಯ ಕಂಡುಬಂದಿತು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16Jx8tAspb/
ಮಳೆಗಾಲದಲ್ಲಿಯೂ ಇಂತಹ ಮಳೆ ಬಂದಿರಲ್ಲಿಲ್ಲ. ಕೇವಲ ಕೆಲವೇ ಗಂಟೆಯಲ್ಲಿ ಬಿರುಗಾಳಿಯಿಂದಾಗಿ ಮನೆಯ ಮೇಲ್ಛಾವಣಿ ಇರುವ ಶೀಟುಗಳು ಹಾರಿ ಚೆಲ್ಲಾಪಿಲ್ಲಿಯಾಗಿ ಹೋಗಿದ್ದು ಭಾರಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹೊಳೆಯಂತಾಗಿ ಪಾದಚಾರಿಗಳು ಪರದಾಡುವಂತಾಯಿತು.

ಸುಮಾರು 60-70 ವರ್ಷದ ಅನಂತಶಾಸ್ತ್ರಿ, ಜೆ.ಎಸ್.ಚಂದ್ರಪ್ಪ, ಗಂಗಾಧರ ಮಳವಳ್ಳಿ, ಟಿ.ಆರ್.ಕೃಷ್ಣಪ್ಪ, ಆರ್.ಕೇಶವ, ಎಂ.ಡಿ. ಇಂದ್ರಮ್ಮ, ಕೋಮಲ, ಜಯಲಕ್ಷ್ಮಿ, ವೆಂಕಟೇಶ, ಭದ್ರಣ್ಣ, ಮುಡುಬ ಧರ್ಮಣ್ಣ, ಆರ್.ಹೆಚ್.ರಂಗಪ್ಪ ಇನ್ನಿತರರು ಹೇಳುವಂತೆ, ನಾವು ಇಷ್ಟು ವರ್ಷದಲ್ಲಿ ಈ ರೀತಿಯಲ್ಲಿ ಆಲಿಕಲ್ಲು ಮಳೆ ಸುರಿದಿರುವುದು ಕಂಡಿದ್ದು ಇದೇ ಮೊದಲು ಎಂದು ಹೇಳಿದರೆ, ಇತ್ತೀಚಿನ ತಲೆಮಾರಿನ ಚನ್ನಣ್ಣ, ಭರತ್, ರಂಜಿತಾ, ರಮೇಶ, ಡಿ.ಈ.ನಾಗಭೂಷಣ, ಸಂತೋಷ, ಆರ್.ಶೈಲಾಪ್ರಭು ಸುರಿದ ಭಾರಿ ಮಳೆಯಲ್ಲಿ ಆಲಿಕಲ್ಲುಗಳನ್ನು ಆರಿಸಿ ಕಲೆಹಾಕುತ್ತಿದ್ದ ದೃಶ್ಯ ಕಂಡು ಬಂದಿತು.

ಒಟ್ಟಾರೆ ಇಂದು ಕೇವಲ ಒಂದು ಗಂಟೆಯಲ್ಲಿ ಭಾರಿ ಬಿರುಗಾಳಿ ಆಲಿಕಲ್ಲು ಮಳೆಯಿಂದಾಗಿ ರಿಪ್ಪನ್‌ಪೇಟೆ ನಗರದ ಕಸ, ಕಲುಷಿತ ನೀರು ಚರಂಡಿ ರಸ್ತೆ ಮೇಲೆ ಹರಿದು ಸ್ವಚ್ಚಗೊಳಿಸಿತು.