ರಿಪ್ಪನ್‌ಪೇಟೆ ; ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಪಾರಂಪರಿಕೆ ಅಯುರ್ವೇದ ಪದ್ದತಿಯಲ್ಲಿ ಗಿಡಮೂಲಿಕೆ ಔಷಧಿಯ ಗುಣ ಹೊಂದಿರುವ ಸಸ್ಯಗಳನ್ನು ಬಳಸುವುದರಿಂದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವಂತ ಮಾರಕ ರೋಗವನ್ನು ಗುಣಪಡಿಸಬಹುದೆಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಹುಂಚ ಶ್ರೀಸಿದ್ದಿವಿನಾಯ ಸೇವಾ ಸಮಿತಿ, ಹೊಂಬುಜ ಜೈನಮಠ, ರೋಟರಿ ಕ್ಲಬ್ ಕೋಣಂದೂರು ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಪಶು ವೈದ್ಯಕೀಯ ಚಿಕಿತ್ಸೆಯ ಸವಾಲುಗಳಿಗೆ ಪಶು ಆಯುರ್ವೇದ ಮತ್ತು ಪರ್ಯಾಯ ವಿಜ್ಞಾನ ಪದ್ದತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಹೈನುಗಾರಿಕೆಗೆ ಹೆಚ್ಚು ಅದ್ಯತೆ ನೀಡಲಾಗಿದ್ದರೂ ಕೂಡಾ ಇಂದಿನ ದಿನಗಳಲ್ಲಿ ಜಾನುವಾರುಗಳಲ್ಲಿ ಸಹ ಮಾರಕ ರೋಗಗಳು ಉಲ್ಬಣಗೊಳ್ಳುತ್ತಿದ್ದು ಸಾಕಾಣಿಕೆ ಸಹ ಕಷ್ಟಕರವಾಗಿದೆ. ಪಶು ಚಿಕಿತ್ಸೆಯಲ್ಲಿ ಪಶುವೈದ್ಯರು ಅಲೋಪತಿ ಡ್ರಗ್ ಗಳನ್ನ ಉಪಯೋಗಿಸುತ್ತಿದ್ದಾರೆ. ಯಾಕೆಂದರೆ ಅವರುಗಳು ಪದವಿಯಲ್ಲಿ ಓದುವುದು ಕೇವಲ ಅಲೋಪತಿ ಮೆಡಿಸಿನ್ ಬಗ್ಗೆ ಮಾತ್ರ ಆದರೆ ಜಾನುವಾರು ಚಿಕಿತ್ಸೆಗೆ ಕಡಿಮೆ ಬೆಲೆಯ ಪೆನಿಸಿಲಿನ್ ಕೆಲಸ ಮಾಡುತ್ತಿಲ್ಲ ಆದರೆ ಸಾವಿರಾರು ರೂಪಾಯಿ ಬೆಲೆಯ ಹೊಸ ಹೊಸ ಅಂಟಿಬಯೋಟೆಕ್ ಉಪಯೋಗಿಸುವುದು ರೈತರಿಗೆ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರವೂ ಪಶುವೈದ್ಯ ಕಾಲೇಜ್‌ನಲ್ಲಿ ಆಯುರ್ವೇದ (ಬಿವಿಎಎಂಎಸ್) ವಿಜ್ಞಾನ ಹೋಮಿಯೋಪತಿ ವಿಜ್ಞಾನ ವಿಷಯದಲೂ ಪದವಿ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಮುಖಂಡ ಅಭಿಷೇಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ಜೀವಂದರ್, ಶಿಮುಲ್ ಜನರಲ್ ಮ್ಯಾನೇಜರ್ ಡಾ.ಕೃಷ್ಣರೆಡ್ಡಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಬಾಬುರತ್ನ, ರೋಟರಿ ಕ್ಲಬ್ ಸದಾಶಿವಾ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಸುಮಂಗಲ ದೇವರಾಜ್, ಶ್ರೀಧರ ಕಡಸೂರು, ಜೆ.ಪಿ.ಕಿರಣ್, ಡಾ.ಪಣಿರಾಜ್, ಡಾ.ಮುರುಳಿಧರ, ಈರನಬೈಲು ನಾಗೇಂದ್ರ, ಅಶ್ವತ್‌ಭಟ್, ಇನ್ನಿತರರು ಇದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.