Hosanagara | ಜಲಾನಯನ ಪ್ರದೇಶದ ಪ್ರಮುಖ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಭಾರಿ ಗಾಳಿಯೊಂದಿಗೆ ಮಳೆಯಾರ್ಭಟ ಮುಂದುವರೆದಿದ್ದು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ತಹಶೀಲ್ದಾರ್ ರಶ್ಮಿ ಹಾಲೇಶ್ ಆದೇಶಿಸಿದ್ದಾರೆ.
ಇನ್ನೂ ತಾಲೂಕಿನ ಚಕ್ರಾನಗರದಲ್ಲಿ ಶುಕ್ರವಾರ ಬೆಳಗ್ಗೆ 8: 30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.
ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
- ಚಕ್ರಾನಗರ : 290 mm
- ಹುಲಿಕಲ್ : 180 mm
- ಮಾಸ್ತಿಕಟ್ಟೆ : 168 mm
- ಯಡೂರು : 157 mm
- ಮಾಣಿ : 148 mm
- ಹುಂಚ : 120 mm
- ಸಾವೇಹಕ್ಲು : 114 mm
- ಕಾರ್ಗಲ್ (ಸಾಗರ) : 102 mm
- ಹೊಸನಗರ : 48.2 mm
- ಅರಸಾಳು : 38.2 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ 1805 ಅಡಿಗಳ ಹತ್ತಿರ ತಲುಪಿದ್ದು, ಜಲಾಶಯಕ್ಕೆ 65147 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ನಿನ್ನೆ 2.10 ಅಡಿ ನೀರು ಬಂದಿದ್ದು, ಜಲಾಶಯ ಶೇ. 71.43 ರಷ್ಟು ಭರ್ತಿಯಾಗಿದೆ.