HOSANAGARA | ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನ್ಯಾಕ್ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಹಾಗೂ ಮಹಿಳಾ ವಿಭಾಗದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಎರಡು ವಿಭಾಗಗಳಲ್ಲಿ ಶಿವಮೊಗ್ಗದ ಡಿವಿಎಸ್ ಕಾಲೇಜ್‌ನ ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಪಾರಿತೋಷಕ ಗಿಟ್ಟಿಸುವ ಮೂಲಕ ದಾಖಲೆ ಸೃಷ್ಟಿಸಿದರು.
10 ಕಿ.ಮೀ. ಅಂತರದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಈ ಹಿಂದಿನ 34 ನಿಮಿಷದ ದಾಖಲೆಯನ್ನು ಡಿವಿಎಸ್ ಕಾಲೇಜಿನ ಕೆ. ಕಿರಣ್ ಇಂದು ಕೇವಲ 32 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು.
ಮಹಿಳೆಯರ ವಿಭಾಗದಲ್ಲಿ ಡಿವಿಎಸ್ ಕಾಲೇಜಿನ ಹೆಚ್.ವಿ ದೀಕ್ಷಾ ಪ್ರಥಮ ಸ್ಥಾನ ಗಳಿಸುವ ಮೂಲಕ ಪುರುಷ ಹಾಗೂ ಮಹಿಳಾ ವಿಭಾಗದ ಎರಡು ವಿಭಾಗಗಳಲ್ಲಿನ ಪಾರಿತೋಷಕ ಬಾಚಿಕೊಂಡರು.
ಮಹಿಳೆಯರ ವಿಭಾಗದಲ್ಲಿ ಶಂಕರಘಟ್ಟದ ಕೆ.ಪಿ ಮಾನಸ 2ನೇ ಸ್ಥಾನ, ತೀರ್ಥಹಳ್ಳಿಯ ಕೆ.ಎಸ್ ಸ್ವಾಗತ್ 3ನೇ ಸ್ಥಾನ, ಹೊಸನಗರ ಕೊಡಚಾದ್ರಿ ಕಾಲೇಜಿನ ಎಂ.ಪಿ ಪುಷ್ಪ 4ನೇ ಸ್ಥಾನ, ಸಾಗರದ ಎಸ್ ಸಂಜನಾ 5ನೇ ಸ್ಥಾನ, ತೀರ್ಥಹಳ್ಳಿಯ ಡಿ.ಪಿ ಪ್ರೀತಿ 6ನೇ ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಎನ್.ಆರ್. ಪುರದ ಶರಪಂಜಿತ ಆರ್ 2ನೇ ಸ್ಥಾನ, ಶಿವಮೊಗ್ಗ ಡಿವಿಎಸ್ ಕಾಲೇಜಿನ ಎಂ.ಎಸ್ ಆಶ್ರಿತ, ಹೊಸನಗರ ಕೊಡಚಾದ್ರಿ ಕಾಲೇಜಿನ ಶಶಾಂಕ್ 4ನೇ ಸ್ಥಾನ ಶಂಕರಘಟ್ಟದ ನಿತಿನ್ 5ನೇ ಸ್ಥಾನ, ಶಿವಮೊಗ್ಗ ಡಿವಿಎಸ್ ಕಾಲೇಜಿನ ವೈ.ಎಸ್ ಸುದರ್ಶನ್ 6ನೇ ಸ್ಥಾನ ಗಳಿಸಿದರು.
ಈ ಎಲ್ಲಾ ವಿಜೇತರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ, ಕೊಡಚಾದ್ರಿ ಕಾಲೇಜು ಪ್ರಾಂಶುಪಾಲ ಡಾ. ಕೆ ಉಮೇಶ್ ಅಧ್ಯಕ್ಷತೆಯಲ್ಲಿ ಪಾರಿತೋಷಕ ವಿತರಿಸಿದರು.
ಕೊಡಚಾದ್ರಿ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ನನ್ನ ಸಂಪೂರ್ಣ ಶ್ರಮವಿದೆ ; ಬೇಳೂರು ಗೋಪಾಲಕೃಷ್ಣ
HOSANAGARA | ಪಟ್ಟಣದಲ್ಲಿರುವ ಕೊಡಚಾದ್ರಿ ಸರ್ಕಾರಿ ಪ್ರಥಮ ರಾಜ್ಯ ಕಾಲೇಜಿನ ಸಮಗ್ರ ಬೆಳವಣಿಗೆಗೆ ನನ್ನ ಸಂಪೂರ್ಣ ಬೆಂಬಲವಿದ್ದು ಇದೀಗ ಮತ್ತೆ ಕಾಲೇಜಿನ ಅಭಿವೃದ್ಧಿಗೆ 2 ಕೋಟಿ ರೂ.ಗಳ ಅನುದಾನ ಬಂದಿದ್ದು ಅದರಲ್ಲಿ ಸುಸಜ್ಜಿತ ಗ್ರಂಥಾಲಯ ಶೌಚಾಲಯ ಉತ್ತಮವಾದ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕೊಡಚಾದ್ರಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಂದು ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಬಗ್ಗೆ ಸ್ಪರ್ಧೆಯ ವಿಜೇತರಿಗೆ ಪಾರಿತೋಷಕ ವಿತರಿಸಿ ಮಾತನಾಡಿ, ಹೊಸನಗರದ ವಿದ್ಯಾರ್ಥಿಗಳು ಎಲ್ಲ ಕ್ರೀಡೆಗಳಲ್ಲು ತಮ್ಮ ಹಿರಿಮೆಯನ್ನು ಪ್ರದರ್ಶಿಸುತ್ತಿದ್ದು ಕ್ರೀಡೆಗಳಲ್ಲಿ ತೋರಿಸಿದ ಉತ್ಸಾಹವನ್ನೇ ಓದಿನಲೂ ಪ್ರದರ್ಶಿಸಿ ರಾಜ್ಯ ಮಟ್ಟದಲ್ಲೇ ತಮ್ಮ ಹಿರಿಮೆಯನ್ನು ಪ್ರದರ್ಶಿಸಬೇಕೆಂದು ಅದಕ್ಕೆ ಏನೇ ಸೌಲಭ್ಯ ಬೇಕಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಉಮೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಾಲೇಜ್ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸದಸ್ಯರಾದ ಡಾ. ಕವಿತಾ ಪ್ರವೀಣ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್ ಪ್ರವೀಣ, ಎಂ.ಪಿ ಲೋಕೇಶ್ವರ, ವರ್ತಕ ಎಸ್ ಎನ್ ರಾಜಮೂರ್ತಿ, ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಧರ್ಮರಾವ್, ಐಕ್ಯೂಎಸಿ ಸಂಚಾಲಕ ಸಿ.ಹೆಚ್ ರವಿ, ಕ್ರೀಡಾ ವಿಭಾಗದ ಸಂಚಾಲಕ ಡಾ. ಎಚ್ ಲೋಕೇಶಪ್ಪ, ಶ್ರೀಧರ್ ಹಳಗುಂದ ಅಣ್ಣಪ್ಪ, ಮಹೇಂದ್ರ, ನಾಗೇಶ್, ಬೃಂದಾವನ ಪ್ರವೀಣ್, ಬಗರ್ ಹುಕುಂ ಸಮಿತಿಯ ಸಾಕಮ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಶ್ಚಿತ ಸಂಗಡಿಗರಿಂದ ಪ್ರಾರ್ಥಿಸಿದರ. ಡಾ. ಶ್ರೀಪತಿ ಹಳಗುಂದ ಪ್ರಾಸ್ತಾವಿಕ ಮಾತನಾಡಿದರು. ವಸುಧಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಬಿ.ಜಿ ಸುಬ್ರಮಣ್ಯ ವಂದಿಸಿದರು.