ಹೊಸನಗರ ; ಇತಿಹಾಸ ವಿಜ್ಞಾನ ಇವುಗಳು ಸಾಹಿತ್ಯವಾಗುವುದಿಲ್ಲ ಎಂದು ಕನಕಪುರದ ನಿವೃತ್ತ ಸಹ ಪ್ರಾಧ್ಯಾಪಕ ಡಿ.ಎಸ್ ನಾಗರಾಜ್ ಹೇಳಿದರು.
ಕಸಾಪ ಆವರಣದಲ್ಲಿ ದಾನಮ್ಮ ಬೊಮ್ಮನಾಯಕರು ಸುಬ್ಬುಲಕ್ಷ್ಮಿ ಮತ್ತು ಸೀನಪ್ಪ ಶ್ರೇಷ್ಠಿ ಇವರ ದತ್ತಿ ನಿಧಿ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ವಿಶ್ಲೇಷಿಸಿ ಅವರು ಮಾತನಾಡಿದರು.
ಸಾಹಿತಿ ಅದಕ್ಕೆ ಇತಿಹಾಸದ ನಾಯಕನ ಮನಸ್ಸಿನ ತಳಮಳ ಸಂವೇದನೆ ಮತ್ತು ಸೃಜನಶೀಲತೆಗಳಿಗೆ ಜೀವ ನೀಡಿ ಅದನ್ನು ಸಾಹಿತ್ಯವಾಗಿಸುತ್ತಾನೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ, ಪತ್ರಕರ್ತ ಕೆ.ಜಿ. ವೆಂಕಟೇಶ್ ತಾಲೂಕು ಸಾಹಿತಿಗಳ ಕೊಡುಗೆ ಒಂದು ಚಿಂತನೆ ಎಂಬ ವಿಷಯದ ಬಗ್ಗೆ ಮಾತನಾಡಿ, ತಾಲೂಕಿನಲ್ಲಿರುವ ಹಿರಿಯ, ಕಿರಿಯ ಎಲ್ಲ ಸಾಹಿತಿಗಳ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು.
ಕೆ.ಕೆ ಅಶ್ವಿನಿಕುಮಾರ್ ಉದ್ಘಾಟಿಸಿ,
ಕಸಾಪ ಹೊಸನಗರ ತಾಲೂಕು ಅಧ್ಯಕ್ಷ ಗಣೇಶ್ ಮೂರ್ತಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಾ. ಮಾರ್ಷಲ್ ಶರಾಂ, ಹುಂಚ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಬಷೀರ್ ಅಹಮದ್, ವೇಣುಗೋಪಾಲ್, ಲಿಂಗಮೂರ್ತಿ, ಚಂದ್ರಶೇಖರ ಶೇಟ್, ಗುರುದೇವ್ ಭಂಡಾರ್ಕರ್ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ.ಜಿ ವೆಂಕಟೇಶ್, ಕೆ.ಜಿ ನಾಗೇಶ್, ಪ್ರಶಾಂತ್, ಶ್ರೀಕಂಠ, ಎಚ್.ಎಸ್ ನಾಗರಾಜ, ಅಶ್ವಿನಿ ಪಂಡಿತ್, ಮನು ಸುರೇಶ್ ಅವರಿಗೆ ಕಸಾಪ ಪರವಾಗಿ ಸನ್ಮಾನಿಸಲಾಯಿತು.
ಕುಬೇಂದ್ರಪ್ಪ ಪ್ರಾರ್ಥಿಸಿದರು. ಶಂಕ್ರಪ್ಪ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ನಿರೂಪಿಸಿದರು. ಪ್ರವೀಣ್ ಎಂ ಕಾರ್ಗಡಿ ವಂದಿಸಿದರು.