ಹೊಂಬುಜ : ಶ್ರೀ ಇಂದ್ರಧ್ವಜ ಮಾಹಾಮಂಡಲ ವಿಧಾನ

Written by malnadtimes.com

Updated on:

RIPPONPETE ; ಜೈನ ಧರ್ಮ ಶಾಸ್ತ್ರದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಯ ಮಹತ್ವವನ್ನು ಅನಾದಿ ಕಾಲದಿಂದಲೂ ಉಲ್ಲೇಖಿಸಲಾಗಿದೆ. ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ “ಇಂದ್ರಧ್ವಜ ಮಹಾಮಂಡಲ ವಿಧಾನ” ಧಾರ್ಮಿಕ ಪೂಜಾ ವಿಧಾನವನ್ನು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವ ನೆರವೇರಲಿದೆ.

WhatsApp Group Join Now
Telegram Group Join Now
Instagram Group Join Now

ಪೂಜ್ಯ ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರ ಸಾನಿಧ್ಯದಲ್ಲಿ ನವೆಂಬರ್ 13 ರಿಂದ 20ರವರೆಗೆ (ಕಾರ್ತೀಕ ಶುಕ್ಲ ದ್ವಾದಶಿಯಿಂದ ಕೃಷ್ಣ ಪಂಚಮಿಯವರೆಗೆ) ಆಯೋಜಿಸಿದ್ದು ವಿವಿಧ ಜೈನ ಶ್ರೀಮಠದ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರಕ್ಕೆ ಆಗಮಿಸಲಿರುವರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳ ಭಕ್ತವೃಂದದವರು ಪ್ರಪ್ರಥಮವಾಗಿ ನೆರವೇರುವ ಇಂದ್ರಧ್ವಜ ಮಹಾಮಂಡಲ ವಿಧಾನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೊಂಬುಜ ಶ್ರೀಮಠದ ಪ್ರಕಟನೆ ತಿಳಿಸಿದೆ.

ಶ್ರವಣಬೆಳಗೊಳ ಶ್ರೀಗಳ ಪುರಪ್ರವೇಶ :

ನವೆಂಬರ್ 17 ರ ಭಾನುವಾರದಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀಕ್ಷೇತ್ರ ಶ್ರವಣಬೆಳಗೊಳ ಇವರು ಪಟ್ಟಾಭಿಷಿಕ್ತರಾದ ಬಳಿಕ ಪ್ರಥಮ ಬಾರಿಗೆ ಅತಿಶಯ ಶ್ರೀಕ್ಷೇತ್ರ ಹೊಂಬುಜಕ್ಕೆ ಪುರಪ್ರವೇಶ ಮಾಡಲಿರುವರು.

ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ತ್ರಿಕೂಟ ಜಿನಾಲಯ ದರ್ಶನ ಪಡೆದು ಇಂದ್ರಧ್ವಜ ಮಹಾಮಂಡಲ ಆರಾಧನೆಯಲ್ಲಿ ಉಪಸ್ಥಿತಿ ನೀಡಲಿರುವರು. ಶ್ರೀಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಲಾಗುವುದು.

ಪ್ರತಿಭಾ ಪುರಸ್ಕಾರ :

ಶಿವಮೊಗ್ಗ ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಪ್ರತಿಭಾ ಪುರಸ್ಕಾರ ನೀಡಲಾಗುವುದು.

Leave a Comment