ಹುಲಿಕಲ್ ಘಾಟ್ ಕಾಮಗಾರಿ ವೇಳೆ ಘೋರ ದುರಂತ ; ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವು !

Written by Mahesha Hindlemane

Updated on:

ಹೊಸನಗರ ; ಕಾಮಗಾರಿ ವೇಳೆ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕು ಹುಲಿಕಲ್‌ ಘಾಟಿಯಲ್ಲಿ ನಡೆದಿದ್ದು ಹಲವು ಕಾರ್ಮಿಕರು ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಘಾಟಿಯ ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ತಿರುವಿನಲ್ಲಿ ಘಟನೆಯಾಗಿದೆ. ಹೇರ್‌ಪಿನ್‌ ತಿರುವಿನಲ್ಲಿ ಮಣ್ಣು ಕುಸಿಯುತ್ತಿತ್ತು. ಈ ಹಿನ್ನೆಲೆ ರಸ್ತೆ ರಿಪೇರಿ ಕಾಮಗಾರಿ ನಡೆಸಲಾಗುತಿತ್ತು. ಇಂದು ಸಂಜೆ 6 ಗಂಟೆ ಸುಮಾರಿಗೆ ಕಾರ್ಮಿಕರ ಮೇಲೆ ಮಣ್ಣು ಜಾರಿದೆ. ಮಣ್ಣಿನ ಅಡಿ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಮೃತರನ್ನು ಚಕ್ಕಾರು ನಗರ ವಾಸಿ ರಾಘವೇಂದ್ರ ಬಿನ್ ಕೃಷ್ಣಮೂರ್ತಿ (37), ಹಾವೇರಿ ತಾಲೂಕಿನ ನೀಲವಗಲ್ಲು ರಾಜು (30) ಮತ್ತು ನೀಲವಗಲ್ಲು ನಿವಾಸಿ ಶಬ್ಬೀರ್ (40) ಎಂದು ತಿಳಿದುಬಂದಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1SXi4tXjAS/

ಇನ್ನೂ ಮಣ್ಣಿನ ಅಡಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಗರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಹೊಸನಗರ ಸಿಪಿಐ ಗೌಡಪ್ಪಗೌಡ ಹಾಗೂ ಶಾಸಕ ಆರಗ ಜ್ಞಾನೇಂದ್ರ ಸ್ಥಳದಲ್ಲಿ ಹಾಜರಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ 52ರ ಮಾಸ್ತಿಕಟ್ಟೆ – ಕುಂದಾಪುರ ಮಾರ್ಗದಲ್ಲಿ ವಾಹನಗಳ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Comment