ಹೊಸನಗರ ; ತಾಲೂಕು ಕುಂಬಾರರ ಸಂಘದ 18ನೇ ವಾರ್ಷಿಕ ಮಹಾಸಭೆ, ಕುಂಬಾರ ಸಮಾಜದ ಸಮಾಗಮ, ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಮಾ.09ರ ಭಾನುವಾರ ಬೆಳಗ್ಗೆ 10:00 ಗಂಟೆಗೆ ಮೇಲಿನಬೆಸಿಗೆ ಗ್ರಾ.ಪಂ ವ್ಯಾಪ್ತಿಯ ಹೇರಗಲ್ಲು ಗ್ರಾಮದ ಕುಸುಮ ಗೋವಿಂದಪ್ಪ ಇವರ ಮನೆಯ ಆವರಣದಲ್ಲಿ ನಡೆಯಲಿದೆ.
ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಬಿ. ಸ್ವಾಮಿರಾವ್ ಘನ ಉಪಸ್ಥಿತಿ ಇರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಶೇಖರಪ್ಪ ಎಲ್. ಹಿಂಡ್ಲೆಮನೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೇಲಿನಬೆಸಿಗೆ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ ಸೋಮಶೇಖರ, ಸದಸ್ಯರಾದ ಜ್ಯೋತಿ ನಾಗರಾಜ್, ನಾಗರಾಜ್ ಜಿ., ಸತೀಶ್ ಎನ್., ಜಿ.ಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಭಾಗವಹಿಸಲಿದ್ದಾರೆ. ನಗರ ಸಿ.ಆರ್.ಪಿ ರವಿ ಕೆ.ಆರ್. ಕೊಳಗಿ ಉಪನ್ಯಾಸ ನೀಡಲಿದ್ದಾರೆ.
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ 75% ಮೇಲ್ಪಟ್ಟು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳಿಗೆ ಸನ್ಮಾನ ಹಾಗೂ ಹಿರಿಯರಾದ ಹೊನ್ನಮ್ಮ ಹೇರಗಲ್ಲು, ವೆಂಕಟಪ್ಪ ದೊಡ್ಮನೆ ಇವರಿಗೆ ಗೌರವ ಸಮರ್ಪಣೆ ಏರ್ಪಡಿಸಲಾಗಿದೆ.