ಹೊಸನಗರ ; ತಾಲ್ಲೂಕು ಪದವಿಪೂರ್ವ ಕಾಲೇಜ್ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಹೊಸನಗರ ಪದವಿಪೂರ್ವ ಕಾಲೇಜ್‌ನ ಪ್ರಾಂಶುಪಾಲ ಸ್ವಾಮಿರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಉಪನ್ಯಾಸಕರ ಸಂಘದ ಅಧೀನದಲ್ಲಿ ಹೊಸನಗರ ತಾಲ್ಲೂಕು ಉಪನ್ಯಾಸಕರ ಸಂಘವನ್ನು ಆಯ್ಕೆ ಮಾಡಲಾಗಿದ್ದು ಗೌರವಾಧ್ಯಕ್ಷರಾಗಿ ಹೊಸನಗರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ದಾಮೋದರ ಶೆಣೈ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಕಾಲೇಜಿನ ಉಪನ್ಯಾಸಕಿ ಅಂಬಿಕಾ, ಕಾಯಾಧ್ಯಕ್ಷರಾಗಿ ರಾಜೇಶ್ ಭೋಳಾರ್, ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ಜಿ ಬೆಂಜಮಿನ್, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ, ಖಜಾಂಚಿಯಾಗಿ ನಾಗೇಶ್ ಜಿ.ಎಸ್, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಸಹಕಾರ್ಯದರ್ಶಿಯಾಗಿ ಗಣಪತಿ ಎಂ, ಸಂಚಾಲಕರಾಗಿ ಸುಮಾನ ಡಿ.ಎಸ್, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜ್‌ಗಳಿಂದ ಜಂಟಿ ಕಾರ್ಯದರ್ಶಿಯಾಗಿ ಶೇಷಾದ್ರಿ ಎನ್, ಸಹ ಸಂಚಾಲಕರಾಗಿ ಗುರುರಾಜ್ ಸಿ ಆಯ್ಕೆಯಾಗಿದ್ದಾರೆ.

