ಹೊಸನಗರ ; ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದ ಮುಕುಂದಚಂದ್ರ (49) ಅನಾರೋಗ್ಯದ ಕಾರಣ ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರರು ಸೇರಿದಂತೆ ಹಾಗೂ ಅಪಾರ ಬಂದು-ಬಳಗವನ್ನು ಅಗಲಿದ್ದಾರೆ.
ಇವರು ಪ್ರಪ್ರಥಮವಾಗಿ ಎಲ್‌ಎಲ್‌ಬಿ ಮುಗಿಸಿ ಹೊಸನಗರದ ಹಿರಿಯ ವಕೀಲ ಹಿರಿಯಪ್ಪನವರ ಜೊತೆ ನ್ಯಾಯಾವಾದಿಯಾಗಿ ಸೇವೆ ಸಲ್ಲಿಸಿ ನಂತರ ತಮ್ಮ ವಕೀಲರ ಕಛೇರಿ ತೆರೆದು ಸೇವೆ ಸಲ್ಲಿಸುತ್ತಿದ್ದರು.
ಸಂತಾಪ :
ಮುಕುಂದಚಂದ್ರರ ನಿಧನಕ್ಕೆ ಹೊಸನಗರದ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪನವರ ನೇತೃತ್ವದಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಿ ಮೃತರಿಗೆ ಸಂತಾಪ ಸೂಚಿಸಲಾಗಿದ್ದು ಹೊಸನಗರ ಹಿರಿಯ ವಕೀಲರಾದ ಹಿರಿಯಪ್ಪ, ಷಣ್ಮುಖಪ್ಪ, ವಾಲೆಮನೆ ಶಿವಕುಮಾರ್, ಈರಪ್ಪ, ವೈ.ಪಿ. ಮಹೇಶ್, ಉಮೇಶ್, ಗುರುಕಿರಣ್, ಗಗ್ಗ ಬಸವರಾಜ್, ಗುರುರಾಜ್, ಮಹಾದೇವಪ್ಪ, ಪ್ರಶಾಂತ್, ವಿನಾಯಕ, ವಿಜಯ ಹೊಳ್ಳಗದ್ದೆ, ಲೋಕೇಶ್, ಹೆಚ್.ಎನ್ ಲೋಕೇಶ್, ಮೊಹನ್ ಶೆಟ್ಟಿ, ಕರ್ಣಕುಮಾರ್, ರವೀಂದ್ರ, ಸುರೇಶ್ ಕುಮಾರ್, ಮಂಡಾನಿ ಗುರುಮೂರ್ತಿ ಇನ್ನೂ ಮುಂತಾದವರು ಮೃತರ ನಿವಾಸ ಮಂಡ್ಲಿಗೆ ತೆರಳಿ ಸಂತಾಪ ಸೂಚಿಸುವುದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿದರು.