HOSANAGARA | ಆ. 2ರಂದು ಬೆಳಿಗ್ಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಹೊಸನಗರ ತಾಲ್ಲೂಕಿನ ಸರ್ಕಾರಿ ನೌಕರರೊಂದಿಗೆ ಚಕ್ರಾ, ಸಾವೇಹಕ್ಲು ಡ್ಯಾಂಗೆ ಬಾಗಿನ ಸಮರ್ಪಣೆ ಮಾಡಿರುವುದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ ಹಾಗೂ ಹೊಸನಗರ-ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪನವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯರವರು ಹೇಳಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಹೊಸನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 31ರಂದು ಬೆಳಗ್ಗೆ ಶಾಸಕರಾದ ಆರಗ ಜ್ಞಾನೇಂದ್ರರವರ ನೇತೃತ್ವದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಮಾಜೀ ಶಾಸಕ ಹರತಾಳು ಹಾಲಪ್ಪ, ಎಂ.ಎಲ್.ಸಿ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಹಾಗೂ ನಗರ ಹೋಬಳಿಯ ರೈತರು ಹಾಗೂ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಎಲ್ಲರೂ ಸೇರಿ ಚಕ್ರಾ, ಸಾವೇಹಕ್ಲು ಡ್ಯಾಂಗಳಿಗೆ 40 ವರ್ಷಗಳ ನಂತರ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ರಶ್ಮಿ ಹಾಲೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿದ್ದರು ಕಂದಾಯ ಇಲಾಖೆಯಿಂದ ಈ ಸಂದರ್ಭದಲ್ಲಿಯೇ ಬಾಗಿನ ಸಮರ್ಪಿಸಬಹುದಿತ್ತು ಶಾಸಕರು ಬಾಗಿನ ಸಮರ್ಪಿಸಿದ ಮೇಲೆ ಎರಡು ದಿನಗಳ ನಂತರ ತಾಲ್ಲೂಕಿನ ಆಡಳಿತ ವರ್ಗದ ವತಿಯಿಂದ ಬಾಗಿನ ಸಮರ್ಪಿಸುವುದು ಎನ್ನಿತ್ತು? ಎಂದು ಪ್ರಶ್ನಿಸಿದರು.
ರಾಜಕೀಯ ನಾಯಕರು ಏಕೆ ?
ಶುಕ್ರವಾರ ತಾಲ್ಲೂಕು ಆಡಳಿತದಿಂದ ಬಾಗಿನ ಸಮರ್ಪಣೆಗೆ ಹೊಸನಗರ ತಾಲ್ಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಹಾಗೂ ಮಾಸ್ತಿಕಟ್ಟೆ ಸುಬ್ರಹ್ಮಣ್ಯರವರನ್ನು ಕರೆದುಕೊಂಡು ಹೋಗಿರುವುದು ಏಕೆ? ಎಂದು ಪ್ರಶ್ನಿಸಿದ್ದು ನಾವು ಕರೆದರೇ ಬರುತ್ತಿದ್ದೇವು ಅದನ್ನು ಬಿಟ್ಟು ಸರ್ಕಾರದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್ ಸರ್ಕಾರಿ ಕಾರ್ಯಕ್ರಮ ಮಾಡಿರುವುದು ಸರಿಯೇ? ಎಂದು ಪ್ರಶ್ನಿಸಿದರು.
ಶಾಸಕರಿಂದ ಹಕ್ಕುಚ್ಯುತಿ ಮಂಡನೆ :
ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರಿಗೆ ಅಗೌರವ ಮಾಡಿರುವ ತಹಶೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಶಾಸಕರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.