ಹೊಂಬುಜ : ಜಿನಾಗಮೋಕ್ತ ವಿಧಿ-ವಿಧಾನಗಳೊಂದಿಗೆ ವಾರ್ಷಿಕ ರಥಯಾತ್ರಾ ಮಹೋತ್ಸವ ತೃತೀಯ ದಿನದಂದು ನಿತ್ಯವಿಧಿ ಸಹಿತ ಜಲಾಗ್ನಿ ಹೋಮ, ಶ್ರೀ ಶಾಂತಿಚಕ್ರಾರಾಧನೆ, ಶ್ರೀ ಬಲಿ ಉತ್ಸವವು ಬುಧವಾರ ಪೂರ್ವಾಹ್ನ ನೆರವೇರಿತು.
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಧಾರ್ಮಿಕ ಆರಾಧನೆಗಳು ನೆರವೇರಿದವು.

ಸೇವಾಕರ್ತರಾದ ಸರೋಕ್, ಸರಿತಾ ಬಗಡಾ, ನವೀನ್ ಬಗಡಾ, ಸೇಲಂ, ರಾಜೇಂದ್ರ ಸುಮನ್ ಛಾಬ್ರಾ ಪ್ರತೀಕ್, ನಕುಲ್ ಗೌಹಾಟಿ ಅಸ್ಸಾಂ ರವರನ್ನು ಪೂಜ್ಯ ಶ್ರೀಗಳವರು ಹರಸಿದರು.
ರಾತ್ರಿ ಪುಷ್ಪರಥೋತ್ಸವ, ಬೆಳ್ಳಿ ರಥೋತ್ಸವಗಳು ಸಾಲಂಕೃತ ಶೋಭಾಯಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ವಿಹಾರಗೈಯಿತು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

ವಾದ್ಯಗೋಷ್ಠ, ಚಂಡೆವಾದನ, ಡೊಳ್ಳು ಕುಣಿತದೊಂದಿಗೆ ಗಜರಾಣಿ ಐಶ್ವರ್ಯ, ಅಶ್ವಗಳಾದ ಮಾನವಿ, ಪವನ್, ಭಕ್ತರೊಂದಿಗೆ ರಾಜಬೀದಿಯಲ್ಲಿ ಮೆರಗು ನೀಡಿತು.

