ಹೊಸನಗರದಲ್ಲಿ ಅದ್ದೂರಿ ದಸರಾ ಆಚರಣೆ | ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ಎಲ್ಲೆಲ್ಲೂ ಸುಖ-ಶಾಂತಿ ನೆಮ್ಮದಿ ನೆಲೆಸಲಿ ; ತಹಶೀಲ್ದಾರ್ ರಶ್ಮಿ ಹಾಲೇಶ್

Written by malnadtimes.com

Published on:

HOSANAGARA ; ದೇಶದಲ್ಲಿ ಕಾವಲು ಕಾಯುವುದರ ಜೊತೆಗೆ ನಮ್ಮನ್ನು ಸುರಕ್ಷಿತವಾಗಿ ಇರುವಂತೆ ಮಾಡಿರುವ ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ದೇಶದಲ್ಲಿ ರಾಜ್ಯದಲ್ಲಿ ಮತ್ತು ಪ್ರತಿಯೊಂದು ಊರು ಗ್ರಾಮಗಳಲ್ಲಿ ಸುಖ-ಶಾಂತಿ ನೆಮ್ಮದಿ ಇರುವಂತೆ ಮಾಡಲೀ ಎಂದು ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್‌ ಪ್ರಾರ್ಥಿಸಿದರು.

WhatsApp Group Join Now
Telegram Group Join Now
Instagram Group Join Now

ಹೊಸನಗರ ಪಟ್ಟಣ ಪಂಚಾಯತಿಯಲ್ಲಿ ಹಾಗೂ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಉಪ-ಖಜಾನೆಗೆ ಪೂಜೆ ಸಲ್ಲಿಸಿ ನಂತರ ತಾಯಿ ಚಾಮುಂಡೇಶ್ವರಿ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ವಿಜಯಿಭವ, ದಿಗ್ವಿಜಯಿಭವ, ಸಾಮಾನ್ಯವಾಗಿ ಯೋಧರನ್ನು ಹರಿಸುವ ನುಡಿ ಆದರೆ ಇದನ್ನು ಸಾಮಾನ್ಯವಾಗಿ ಎಲ್ಲರಿಗೂ ಬಳಸುವುದು ವಾಡಿಕೆಯಾಗಿದೆ. ಅಂದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಯೋಧರೇ ಎಲ್ಲರೂ ಜಯಕ್ಕಾಗಿ ಹಂಬಲಿಸುವವರೆ ಕೃಷಿಕನೊಬ್ಬ ಉತ್ತಮ ಫಸಲು ಬಂದು ಹೆಚ್ಚು ಲಾಭ ತರಲು ನಿರೀಕ್ಷಿದರೇ ಕಛೇರಿಯಲ್ಲಿ ಕೆಲಸ ಮಾಡುವಾತ ಈ ದಿನದ ಕೆಲಸವೆಲ್ಲ ಸುಲಭವಾಗಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಂತಾಗಲಿ ಎಂದು ನಿರೀಕ್ಷಿಸುತ್ತೇನೆ. ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಭಯಸುತ್ತಾನೆ. ಈ ನಿರೀಕ್ಷೆಯ ಹಿನ್ನೆಲೆಯಲ್ಲಿ ಆಯುಧ ಪೂಜೆ ಮಹತ್ವ ಪಡೆದಿದ್ದು ನಾಡಹಬ್ಬಗಳ 9 ದಿನಗಳು ವಿಶೇಷತೆಯಿಂದ ಕೂಡಿದ್ದು ಮಹಾನವಮಿಯಂದು ಆಯುಧ ಪೂಜೆ ಎಂದು ಆಚರಿಸುವ ಸಂಪ್ರದಾಯ ಪೂರ್ವದಿಂದಲೂ ಬಂದಿದೆ. ಈ 9 ದಿನಗಳಲ್ಲಿ 8ನೇ ದಿನ ಆಯುಧಗಳನ್ನು ಶುದ್ದಗೊಳಿಸಿ ಪೂಜಿಸುವ ಹಬ್ಬವೇ ಆಯುಧಪೂಜೆ ಮರುದಿನ 9ನೇ ದಿನವನ್ನು ವಿಜಯ ಸಾಧಿಸುವ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ನಮ್ಮ ವಾಡಿಕೆಯಾಗಿದೆ ಎಂದರು.

ವಿಜಯದಶಮಿಯೆಂದು ಆಚರಿಸುವ ಈ ದಿನದಂದು ಮಹಾತ್ಮ ಪಡೆದಿದೆ. ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ತಾಯಿಯ ಮೆರವಣಿಗೆ ನಡೆಸಿ ಬನ್ನಿಮಂಟಪಕ್ಕೆ ಹೋಗಿ ಬನ್ನಿ ಕಡಿಯುವ ಈ ಕಾರ್ಯಕ್ರಮ ನಡೆಸಿ ನಂತರ ಮಾತನಾಡಿ, ಪ್ರತಿ ವರ್ಷ ಬನ್ನಿ ಕಡಿಯುವ ಕಾರ್ಯಕ್ರಮ ನಡೆಸುತ್ತಿದ್ದು ಈ ಬನ್ನಿಯನ್ನು ಪಡೆದು ದೊಡ್ಡವರು ಸಣ್ಣವರು ಎಂಬಾ ಭೇದವಿಲ್ಲದೇ ಎಲ್ಲರ ಆಶೀರ್ವಾದ ಪಡೆಯುವ ಈ ಪದ್ದತಿಯಾಗಿದ್ದು ನಮ್ಮ ನಮ್ಮಲಿರುವ ಭೇದ-ಭಾವ-ದ್ವೇಷ ಆಸೂಯೇ ಮರೆತು ಎಲ್ಲರೂ ಒಟ್ಟಗುವ ಉದ್ಧೇಶವೇ ಕಾರ್ಯಕ್ರಮವಾಗಿದ್ದು ಎಲ್ಲರೂ ಒಟ್ಟಾಗಿ ಒಂದಾಗಿ ಬಾಳುವುದರ ಮೂಲಕ ನಾಡಿನಲ್ಲಿ ಶಾಂತಿ ಸಮೃದ್ಧಿ ನೆಲೆಯಾಗಲೀ ಎಂದರು.

ದಸರಾ ಸಮಿತಿ ಅಧ್ಯಕ್ಷ ಪಟ್ಟಣ ದುಮ್ಮ ವಿನಯ್‌ಕುಮಾರ್ ಮಾತನಾಡಿ, ದಸರಾ ಆಚರಣೆಯನ್ನು ಹೊಸನಗರದಲ್ಲಿ ಅದ್ದೂರಿಯಾಗಿ ನಡೆಸುವ ಉದ್ದೇಶ ಹೊಂದಿದ್ದು ಅದು ಈಗ ನೆರವೇರಿದೆ. ಜಮಾ ಖರ್ಚುಗಳ ಬಗ್ಗೆ ಲೆಕ್ಕಿಸದೇ ಹೊಸನಗರದ ಬನ್ನಿ ಮಂಟಪದವರೆಗೆ ಮೈಸೂರಿನಲ್ಲಿ ನಡೆಸಲಾದ ದಸರಾ ಕಾರ್ಯದಂತೆ ಹೊಸನಗರದಲ್ಲಿ ನಡೆಸಲು ಪ್ರಯತ್ನಿಸಿದ್ದು ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಹೊಸನಗರದ ಪ್ರಮುಖ ಬೀದಿಗಳಲ್ಲಿ ಹಲವಾರು ಸಾಂಸ್ಕೃತೀಕ ಕಲಾ ತಂಡದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಿದ್ದು ಸಂಜೆ 6ಗಂಟೆಗೆ ದ್ಯಾವರ್ಸ ಈಶ್ವರ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಕಾರ್ಯಕ್ರಮವನ್ನು ತಹಶೀಲ್ದಾರ್ ರಶ್ಮಿ ಹಾಲೇಶ್‌ ನೆರವೇರಿಸಿದರು.

ಈ ಸಂದರ್ಭದಲ್ಲಿ ನಾಡಹಬ್ಬಗಳ ಸಮಿತಿಯ ಸದಸ್ಯರಾದ ಎನ್. ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಎನ್.ಆರ್. ದೇವಾನಂದ್, ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಗುರುರಾಜ್ ಆರ್, ಚಿರಾಗ್, ರೇಣುಕಯ್ಯ, ಸಿದ್ದಪ್ಪ, ಲೋಹಿತ್, ಗಣೇಶ್, ಆಂಜನೇಯ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಕಾರ್ಯದರ್ಶಿ ಹರೀಶ್, ಮಲ್ಲಿಕಾ, ನವೀನ್, ರಾಧಿಕ, ನಾಗಪ್ಪ, ಮಂಜುನಾಥ್, ಕಟ್ಟೆ ಸುರೇಶ್ ಮನೋಹರ್, ಗೋಪಾಲ್, ಹರೀಶ್, ಪ್ರಶಾಂತ್, ಸುಧೀಂದ್ರ ಪಂಡಿತ್, ಬಸವರಾಜ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್ ಎಸ್ ಗುಡ್ಡದ್, ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರು ನಾಗಪ್ಪ ಅಶೋಕ, ಗಣೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment