HOSANAGARA | ನಿಷ್ಕ್ರಿಯಗೊಂಡ ಎಫ್-3 ನಗರ 11 ಕೆ.ವಿ ಮಾರ್ಗದಿಂದ ಸಂಪರ್ಕ ಕಲ್ಪಿಸುವಂತೆ ಹಾಲಗದ್ದೆ ಉಮೇಶ್ ಆಗ್ರಹ

Written by malnadtimes.com

Published on:

HOSANAGARA | ಸುಮಾರು 70 ವರ್ಷಗಳ ಹಿಂದೆಯೇ ಅಂದಾಜು 60-70 ಲಕ್ಷ ರೂ. ವರೆಗೆ ಖರ್ಚು ಮಾಡಿ ಎಫ್-3 ನಗರ 11 ಕೆ.ವಿ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಅದನ್ನು ಇತ್ತೀಚಿನ ವರ್ಷದಲ್ಲಿ ನಿಷ್ಕ್ರಿಯಗೊಳಿಸಿರುವುದನ್ನು ಕೂಡಲೇ ಸಂಪರ್ಕ ಕಲ್ಪಿಸಬೇಕೆಂದು ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹಾಲಗದ್ದೆ ಉಮೇಶ್‌ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

ಸಾಗರದಿಂದ ಹೊಸನಗರ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಈಗಾಗಲೇ 33 ಕೆ.ವಿ. ಮಾರ್ಗವು ದುರಸ್ಥಿಯಲ್ಲಿದ್ದಾಗ ಎಫ್-3 ನಗರ 11 ಕೆ.ವಿ ಮಾರ್ಗವು ಚಾಲ್ತಿಯಲ್ಲಿದ್ದರೆ ಹೊಸನಗರ ಟೌನ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಸಹಾಯವಾಗುತ್ತದೆ ಎಂದು ಈ ಸದುದ್ದೇಶದಿಂದ ಬಹಳ ವರ್ಷಗಳ ಹಿಂದೆ ಎಫ್-3 ನಗರ 11 ಕೆ.ವಿ. ಮಾರ್ಗವು ಹೊಸನಗರ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಅಬಾಬವ ಸಮಯದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ವಿದ್ಯುತ್ ಮಾರ್ಗವನ್ನು ಲಕ್ಷ ಗಟ್ಟಲೇ ಸರ್ಕಾರದ ಹಣವನ್ನು ಉಪಯೋಗಿಸಿಕೊಂಡು ಈ ಮಾರ್ಗವನ್ನು ಮಾಡಿರುತ್ತಾರೆ‌. ಆದರೇ ಮೆಸ್ಕಾಂ ಇಲಾಖೆ ಈ ಲೈನ್ ಉಪಯೋಗಿಸಿಕೊಳ್ಳದೇ ಇರುವುದರಿಂದ ಆ ಭಾಗದಲ್ಲಿ ಜಂಗಲ್ ಬೆಳೆದಿದೆ. ಈ ಲೈನ್ ನಿಷ್ಕ್ರಿಯದಂತೆ ತೋರುತ್ತಿದೆ.

ತಕ್ಷಣ ನಿಷ್ಕ್ರಿಯಗೊಂಡ ಎಫ್ 3 11 ಕೆವಿ ನಗರ ಮಾರ್ಗವನ್ನು ಕೂಡಲೇ ಚಾಲನೆಗೊಳಿಸಿ ಹೊಸನಗರ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಮೆಸ್ಕಾಂ ಇಲಾಖೆಯ ಎಂಡಿಯವರ ಗಮನಕ್ಕೂ ಈಗಾಗಲೇ ತರಲಾಗಿದೆ ಅದರೆ ಇಲ್ಲಿಯವರೆಗೂ ಏನೂ ಪ್ರಯೋಜನವಾಗಿಲ್ಲ. ತಕ್ಷಣ ಮೆಸ್ಕಾಂ ಇಲಾಖೆ ಗಮನ ಹರಿಸುವುದರ ಜೊತೆಗೆ ಹೊಸನಗರ ಪಟ್ಟಣ ಮತ್ತು ಸುತ್ತಮುತ್ತಲಿನ ಜನತೆ ಕತ್ತಲೆಯಲ್ಲಿರುವುದನ್ನು ತಪ್ಪಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಸರ್ಕಾರಿ ವಾಹನ ಬಹಿರಂಗ ಹರಾಜು

HOSANAGARA | ಹೊಸನಗರ ವಲಯ ನಿರೀಕ್ಷಕರ ಕಛೇರಿಯಲ್ಲಿ ಅನುಪಯುಕ್ತ ಸರ್ಕಾರಿ ವಾಹನವಾದ ಟಾಟಾ ಸುಮೊ ಕೆಎ-14ಜಿ-698 ನೊಂದಣಿಯ ವಾಹನವನ್ನು ಜು. 30 ರಂದು ಬೆಳಗ್ಗೆ 11: 00ಗಂಟೆಗೆ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅಬಕಾರಿ ನಿರೀಕ್ಷಕ ನಾಗರಾಜ್‌ ತಿಳಿಸಿದ್ದು, ಆಸಕ್ತರು ಈ ಬಹಿರಂಗ ಹರಾಜಿನಲ್ಲಿ ಬಾಗವಹಿಸಬೇಕೆಂದು ಹೆಚ್ಚಿನ ಮಾಹಿತಿಯನ್ನು ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಕೇಳಿಕೊಂಡಿದ್ದಾರೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಕ್ಷೀಣಿಸಿದ ಮಳೆ, ಜಲಾಶಯ ಭರ್ತಿಗೆ 22 ಅಡಿ ನೀರು ಬಾಕಿ

Leave a Comment