ಹೊಸನಗರ

ಹೊಸನಗರ ; ಮುಖ್ಯ ರಸ್ತೆ ಪಕ್ಕದ ಬೃಹತ್‌ ಮರಗಳ ಮಾರಣಹೋಮ !

ಹೊಸನಗರ ; ಸರ್ಕಾರ ”ಗಿಡ ನೆಡಿ-ಪರಿಸರ ಉಳಿಸಿ”, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ. ರಸ್ತೆಯ ಪಕ್ಕದಲ್ಲಿ ಆರೋಗ್ಯಕರವಾಗಿ ಬೆಳೆದು ನಿಂತಿದ್ದ ನೆರಳಿನ ಮರಗಳು ಗರಗಸಕ್ಕೆ ಆಹುತಿಯಾಗಿ ಧರೆಗುರುಳಿದ್ದು ಪರಿಸರ ಪ್ರೇಮಿಗಳಿಗೆ ಕಣ್ಣೀರು ತರಿಸುವ ಕ್ಷಣಕ್ಕೆ ಸಾಕ್ಷಿಯಾಗಿದೆ. ಸಾಲು ಸಾಲು ಮರಗಳು ಹೀಗೆ ಧರೆಗುರುಳಿದರೆ ನೆರಳಿಗೆ ಆಸರೆ ಹೇಗೆ? ಇದನ್ನು ಕಡಿತಲೆ ಮಾಡುವವರು ಮತ್ತು ಮಾಡಿಸುವವರು ಯೋಚಿಸಬೇಕಾಗಿದೆ.

WhatsApp Group Join Now
Telegram Group Join Now
Instagram Group Join Now

ಇದೆಲ್ಲದರ ನಡುವೆ ನೂರಾರು ವಾಹನಗಳಿಗೆ ನೆರಳಾಗಿ, ಊರಿನ ಅಂದ‌ ಹೆಚ್ಚಿಸುತ್ತಿದ್ದ  ಸಾಲು‌ ಮರಗಳ ಕಡಿತಲೆ‌ ಚೌಡಮ್ಮ ರಸ್ತೆ ಹಾಗೂ ಬಸ್ ನಿಲ್ದಾಣದ ಸುತ್ತ ನಿರಂತರವಾಗಿ ಸಾಗಿದೆ. ತಮ್ಮ ಅಂಗಡಿ ಫಲಕ ಕಾಣುವುದಿಲ್ಲ ಎಂಬ ನೆಪದಲ್ಲಿ ಯಾವುದೇ ಇಲಾಖೆಯ ಅನುಮತಿ ಇಲ್ಲದೆ ರಾತ್ರೋರಾತ್ರಿ ಮರಗಳನ್ನು ಸಂಪೂರ್ಣ ಬೋಳಿಸುತ್ತಾರೆ. ಹೀಗೆ ಬೋಳಿಸಿದ ಅನೇಕ ಮರಗಳು ಮತ್ತೆ ಚಿಗುರುವ ಮೊದಲೆ ಸಾಯುತ್ತಿವೆ.

ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಪೂಜಾರಿ ಅವರ ಅವಿರತ ಶ್ರಮದಿಂದ ಊರಿನಲ್ಲಿ ಅನೇಕ ರಸ್ತೆಗಳಲ್ಲಿ ಸಾಲು ಮರಗಳು ಕಂಗೊಳಿಸುತ್ತಿವೆ. ಆದರೆ ಇವುಗಳ ರಕ್ಷಣೆ ಮಾಡಬೇಕಾದ ಪಟ್ಟಣ ಪಂಚಾಯತಿ ಮರಗಳ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಜೊತೆಗೆ ವಿಪರ್ಯಾಸವೆಂದರೆ ರಾತ್ರಿ ವೇಳೆ ಈ ಮರಗಳನ್ನು ಕಡಿದು ಸಾಗಿಸಲು ಪುರಸಭೆ ನೌಕರರೇ ಸಹಕರಿಸುತ್ತಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷ ಈ ರಸ್ತೆ ಪಕ್ಕದಲ್ಲಿದ್ದ ಮರಗಳನ್ನು ಬೋಳಿಸಿದ ಕಾರಣ ಹತ್ತಾರು ಗಿಡಗಳು ಒಣಗಿ ಸತ್ತಿವೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಒಂದು ಮರ ಬೆಳೆಸಲು 8 ರಿಂದ 10 ವರ್ಷ ಕಾಯಬೇಕು. ಅದು ತನ್ನ ಜೀವಿತಾವಧಿಯಲ್ಲಿ ಮನುಷ್ಯನಿಗೆ ಕೋಟ್ಯಂತರ ರೂ.ಗಳಷ್ಟು ಪರೋಕ್ಷವಾಗಿ ಅನುಕೂಲ ನೀಡುತ್ತದೆ. ಕಡೇ ಪಕ್ಷ ಪ.ಪಂ ಗಿಡಗಳನ್ನು ನೆಟ್ಟು ಬೆಳೆಸುವುದಿರಲಿ ಬೆಳೆದ ಮರಗಳನ್ನು ಉಳಿಸಿಕೊಂಡರೆ ಸಾಕೆಂಬುದು ಇಲ್ಲಿನ ನಾಗರಿಕರ ಆಶಯವಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!