ಹೊಸನಗರ

ಬಾಯ್ಬಿಟ್ಟ ರಸ್ತೆ ; ಅವಘಡಕ್ಕೆ ಕಾದಿರುವ ಹೊಸನಗರ ಕಲ್ಲುಹಳ್ಳ ಸೇತುವೆ !

ಹೊಸನಗರ ; ಕಳೆದ ವರ್ಷ ಮುಂಗಾರು ಆರಂಭಕ್ಕೆ ಮುನ್ನ ತರಾತುರಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಉದ್ಘಾಟನೆಗೊಂಡ ಪಟ್ಟಣಕ್ಕೆ ಸಮೀಪದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಲ್ಲುಹಳ್ಳ ನೂತನ ಸೇತುವೆಯ ಮೇಲ್ಭಾಗದಲ್ಲಿ ರಸ್ತೆ ಇಭ್ಬಾಗವಾಗಿದ್ದು ಸಂಚಾರಕ್ಕೆ ಸಂಚಕಾರಕ್ಕಾಗಿ ಕಾದಂತ್ತಿದೆ.‌ 

WhatsApp Group Join Now
Telegram Group Join Now
Instagram Group Join Now

ರಾಣೆಬೆನ್ನೂರು – ಬೈಂದೂರು ಸಂಪರ್ಕ 766ಸಿ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಕಳೆದ ವರ್ಷ ಸುರಿದ ಭಾರೀ ಮಳೆಗೆ ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ತಡೆಗೋಡೆ ಧರಾಶಾಯಿ‌ ಆಗಿತ್ತು. ಈ ನಡುವೆ ಸೇತುವೆಯ ಎರಡು ಪಿಲ್ಲರ್ ಗಳ ನಡುವಿನ ಸಂಪರ್ಕಕೊಂಡಿ ಬೇರ್ಪಟ್ಟಿದ್ದು ಶೀಘ್ರದಲ್ಲೇ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಭಾರೀ ದುರಂತ ಸಂಭವಿಸುವ ಆತಂಕವಿದೆ ಎಂಬ ದೂರು ನಾಗರೀಕರಿಂದ ಕೇಳಿ ಬರುತ್ತಿದೆ.‌

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!