HOSANAGARA ; ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2023-2024ನೇ ಸಾಲಿನಲ್ಲಿ 14,27,019 ರೂ. ನಷ್ಟು ಲಾಭಾಂಶವಾಗಿದೆ ಎಂದು ಕಳೂರು ರಾಮೆಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್‌ಕುಮಾರ್‌ರವರು ಹೇಳಿದರು.
ಗಾಯತ್ರಿ ಮಂದಿರದಲ್ಲಿ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರಿ ಸಂಘವು ಎ ಶ್ರೇಣಿ ಪಡೆಯುವುದರ ಜೊತೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ 29 ಸಹಕಾರಿ ಸಂಘಗಳಲ್ಲಿ ಉತ್ತಮ ಸಹಕಾರಿ ಸಂಘ ಎಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದೇವೆ. ನಮ್ಮ ಸಂಘವು 40 ಗ್ರಾಮಗಳಿಗೆ ವ್ಯಾಪಿಸಿದ್ದು 2788 ಜನ ಸದಸ್ಯರನ್ನು ಹೊಂದಿರುತ್ತೇವೆ. ಸರ್ಕಾರದ 90,000 ಸೇರಿ ಒಟ್ಟು 1,45,99,598 ರೂಪಾಯಿಗಳಿದ್ದು ಕಾಯ್ದಿರಿಸಿದ ನಿಧಿ ಹಾಗೂ ಇತರ ನಿಧಿಗಳು ರೂಪಾಯಿ 2,03,03,169 ಗಳಿರುತ್ತದೆ ಎಂದರು.
ನಾವು 2023-24ನೇ ಸಾಲಿನಲ್ಲಿ ಒಟ್ಟು 998 ಜನ ಸದಸ್ಯರಿಗೆ ವಿವಿಧ ಸಾಲಗಳ ರೂಪದಲ್ಲಿ ಒಟ್ಟು 9,19,57,711 ಸಾಲವನ್ನು ಕೊಟ್ಟಿರುತ್ತದೆ ಇದರಲ್ಲಿ 307 ಸದಸ್ಯರಿಗೆ ಹೆಚ್ಚುವರಿ ಸಾಲ 1,24,69,000 ಸದಸ್ಯರಿಗೆ ನೀಡಿರುತ್ತೇವೆ ಎಂದರು.
ವ್ಯಾಪಾರ ವಹಿವಾಟು :
2023-24ನೇ ಸಾಲಿನಲ್ಲಿ ಗೊಬ್ಬರ ಮತ್ತು ಕಿಮಿನಾಶಕ ರೂಪಾಯಿ 7,67,05,256 ವ್ಯಾಪಾರ ವಹಿವಾಟು ನಡೆದಿದ್ದು ಒಟ್ಟು ಲಾಭ 18,04,711 ಲಾಭ ಗಳಿಸಿದ್ದು ಒಟ್ಟಾರೇ 14,27,019 ರೂ. ಗಳಾಗಿರುತ್ತದೆ ಎಂದರು.
ಒಟ್ಟಾರೇ ಹೊಸನಗರ ತಾಲ್ಲೂಕಿನ ಎಲ್ಲ ಸಂಘಗಳಿಗಿಂತ ನಮ್ಮ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಸದಸ್ಯರಿಗೆ ಹಾಗೂ ರೈತರಿಗೆ ತಮ್ಮದೇ ಆದಾ ರೀತಿಯಲ್ಲಿ ಉತ್ತಮ ಸೇವೆ ನಡೆಸಿಕೊಂಡು ಬರುತ್ತಿದೆ ಮುಂದಿನ ದಿನಗಳಲ್ಲಿಯೂ ಇನ್ನೂ ಉತ್ತಮವಾದ ಸೇವೆ ಮಾಡುವ ಕಾರ್ಯಕ್ಕೆ ನಮ್ಮ ಆಡಳಿತ ಮಂಡಳಿ ಹಾಗೂ ಸದಸ್ಯರು ಕೈಜೋಡಿಸಬೇಕು ಇದರ ಜೊತೆಗೆ ನಾವು ಚೌಡಮ್ಮ ರಸ್ತೆಯಲ್ಲಿ ನಿರ್ಮಿಸುತ್ತಿರುವ 2 ಕೋಟಿ ರೂ. ವೆಚ್ಚದ ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು ಮುಂದಿನ ಸರ್ವ ಸದಸ್ಯರ ಸಭೆಯ ಒಳಗೆ ಕಟ್ಟಡ ಉದ್ಘಾಟಿಸುವ ಜವಾಬ್ದಾರಿ ಹೊಂದಲಾಗಿದ್ದು ನಮ್ಮ ಸಂಘದ ಎಲ್ಲ ಸದಸ್ಯರು ಕೈಜೊಡಿಸಬೇಕೆಂದರು.
ಈ ಸಭೆಯಲ್ಲಿ ಕಳೂರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ.ವಿ ವೀರೇಂದ್ರ, ಸುರೇಶ್ ಹೆಚ್, ಕೆ.ಸಿ ರೂಪೇಶ್, ಶ್ರೀಮತಿ ವಸಂತಿ ಪಿ, ನಾಗರಾಜ್ ಕೆ.ಎಸ್, ಕೌಶಿಕ್ ಬಿ.ಎಸ್, ಉಪಾಧ್ಯಕ್ಷರಾದ ಎಂ.ಆರ್.ಚಂದ್ರಶೇಖರ್, ನಿರ್ದೇಶಕರಾದ ಜಿ.ಆರ್.ಚಿನ್ನಪ್ಪ, ಜಿ.ಆರ್ ಮಲ್ಲಿಕಾರ್ಜುನ, ಗಂಗಾಧರ ನಾಯಕ್, ಶ್ರೀನಿವಾಸ್, ಗುಬ್ಬಿಗಾ ರವಿ ಜಿ.ಎಸ್, ಹೊವಣ್ಣ, ಪ್ರಮೀಳಾ, ಲಲೀತಮ್ಮ, ಕೆ.ಎಸ್ ಜಯಕುಮಾರ್, ಹಿರಿಯರಾದ ಶ್ರೀನಿವಾಸ್ ಕಾಮತ್, ಕಲ್ಯಾಣಪ್ಪ ಗೌಡ, ಎನ್.ಆರ್. ದೇವಾನಂದ್, ಉಮೇಶ್ ಕಂಚುಗಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.