HOSANAGARA | ರಾಜ್ಯಕ್ಕೆ ವಿದ್ಯುತ್ ಒದಗಿಸುವ ಪ್ರಮುಖ ಜಲಾಶಯ ಲಿಂಗನಮಕ್ಕಿ ಗರಿಷ್ಠ ಮಟ್ಟಕ್ಕಿಂತ 18 ಅಡಿ ಕಡಿಮೆ ಇದ್ದು ಕಳೆದ ವರ್ಷಕ್ಕಿಂತ 26 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ ಎಂದು ಈ ಕೆಳಗೆ ನೀಡಲಾಗಿದೆ.
- ಬಿದನೂರುನಗರ : 138 mm
- ಮಾಸ್ತಿಕಟ್ಟೆ : 130 mm
- ಚಕ್ರಾನಗರ : 130 mm
- ಸಾವೇಹಕ್ಲು : 128 mm
- ಹುಲಿಕಲ್ : 114 mm
- ಯಡೂರು : 89 mm
- ಮಾಣಿ : 87 mm
- ಕಾರ್ಗಲ್ : 82.4 mm
- ಹುಂಚ : 91 mm
- ಹೊಸನಗರ : 53 mm
- ಅರಸಾಳು : 35 mm
- ರಿಪ್ಪನ್‌ಪೇಟೆ : 26 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ಬುಧವಾರ ಬೆಳಗ್ಗೆ 8:00 ಗಂಟೆಗೆ 1801 ಅಡಿ ಗಡಿ ದಾಟಿದ್ದು ಜಲಾಶಯಕ್ಕೆ 58619 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1775.15 ಅಡಿ ದಾಖಲಾಗಿತ್ತು.