HOSANAGARA RAIN | ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 300 ಮಿ‌.ಮೀ.ದಾಖಲೆ ಮಳೆ !

Written by malnadtimes.com

Updated on:

HOSANAGARA | ಮಲೆನಾಡಿನ ತವರೂರು ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಗೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆಯಾಗಿದ್ದು ಜಲಾಶಯಕ್ಕೆ ಒಂದೇ ದಿನ ದಾಖಲೆಯ 5 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

WhatsApp Group Join Now
Telegram Group Join Now
Instagram Group Join Now

ಶರಾವತಿ ನದಿಯ ಇಕ್ಕೆಲಗಳ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು ಉಪನದಿಗಳು ರಭಸದಿಂದ ಹರಿಯುತ್ತಿದೆ.

ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ದಾಖಲೆಯ 300 ಮಿಲಿ ಮೀಟರ್ ಮಳೆ ಬಿದ್ದಿದೆ.

ಮತ್ತೆಲ್ಲಿಲ್ಲಿ ಎಷ್ಟೆಷ್ಟು ?

  • ಮಾಣಿ : 290
  • ಬಿದನೂರುನಗರ : 273
  • ಹುಲಿಕಲ್ : 267
  • ಯಡೂರಿನಲ್ಲಿ : 206
  • ಕಾರ್ಗಲ್ (ಸಾಗರ) : 192.8
  • ಹುಂಚ : 120.2
  • ಹೊಸನಗರ : 91
  • ರಿಪ್ಪನ್‌ಪೇಟೆ : 44.2
  • ಅರಸಾಳು : 37.8

ಲಿಂಗನಮಕ್ಕಿ ಒಂದೇ ದಿನ 5 ಅಡಿ ನೀರು !

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಗ್ಗೆ ಎಂಟು ಗಂಟೆಗೆ 1760.10 ಅಡಿ ತಲುಪಿದ್ದು, ಜಲಾಶಯಕ್ಕೆ 60238 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1741.70 ಅಡಿ ದಾಖಲಾಗಿತ್ತು.

Read More

ಶಿವಮೊಗ್ಗ ಜಿಲ್ಲೆಯ ರೈತರೇ ಗಮನಿಸಿ | ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಲು ಡೇಟ್ ಫಿಕ್ಸ್ ಆಗಿದೆ

SHIVAMOGGA RAIN |  ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಸೊನಲೆಯಲ್ಲಿ ದಾಖಲಾಯ್ತು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ! ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ?

Leave a Comment