ಶಿವಮೊಗ್ಗ ಜಿಲ್ಲೆಯ ರೈತರೇ ಗಮನಿಸಿ | ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಲು ಡೇಟ್ ಫಿಕ್ಸ್ ಆಗಿದೆ

Written by malnadtimes.com

Published on:

SHIVAMOGGA | 2024-25ನೇ ಸಾಲಿಗೆ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIR)ಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ?

ರೈತರು ನೋಂದಾವಣೆಗೆ ಅವಶ್ಯ ದಾಖಲೆಯಾದ ಪ್ರಸ್ತುತ ಸಾಲಿನ ಪಹಣಿ (RTC), ಬ್ಯಾಂಕ್ ಪಾಸ್‍ಬುಕ್ ಪ್ರತಿ, ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್‍ಗಳಿಗೆ ಅಥವಾ ಸಮೀಪದ ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಜುಲೈ 31ರೊಳಗಾಗಿ ಅರ್ಜಿ ಸಲ್ಲಿಸುವುದು.

Adike price today
Adike price today

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಛೇರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ತಾಲ್ಲೂಕುವಾರು ದೂರವಾಣಿ ಸಂಖ್ಯೆಗಳು :

  • ಶಿವಮೊಗ್ಗ : 08182-270415
  • ಭದ್ರಾವತಿ : 08282-26239
  • ಶಿಕಾರಿಪುರ : 08187-223544
  • ಸೊರಬ : 08184-272112
  • ಸಾಗರ : 08183-226193
  • ತೀರ್ಥಹಳ್ಳಿ : 08181-228151
  • ಹೊಸನಗರ : 08185-221364

HOSANAGARA | ಭಾರಿ ಮಳೆಗೆ ರಾ.ಹೆ.ಯಲ್ಲಿ ಗುಡ್ಡ ಕುಸಿತ, ಸಂಚಾರ ಅಸ್ತವ್ಯಸ್ತ !

Leave a Comment