ಹೊಸನಗರ ; ಅದ್ಧೂರಿಯಾಗಿ ನೆರವೇರಿದ ವೀರಾಂಜನೇಯ ದೇವರ ರಥೋತ್ಸವ

Written by malnadtimes.com

Published on:

ಹೊಸನಗರ ; ಹನುಮ ಜಯಂತಿ ಅಂಗವಾಗಿ ಶನಿವಾರ ಇಲ್ಲಿನ ಶ್ರೀ ವೀರಾಂಜನೇಯ ದೇವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

WhatsApp Group Join Now
Telegram Group Join Now
Instagram Group Join Now

17ನೇ ವರ್ಧಂತ್ಯುತ್ಸವ ಅಂಗವಾಗಿ ಶ್ರೀ ದೇವರ ರಥೋತ್ಸವಕ್ಕೂ ಮುನ್ನ ಬೆಳಗ್ಗೆ ಗೋಪೂಜೆ, ಗಣಹೋಮ, ರಾಮತಾರಕ ಹೋಮ, ತೊಟ್ಟಿಲು ಸೇವೆ, ರುದ್ರಾಭಿಷೇಕ, ಪವಮಾನ ಅಭಿಷೇಕ, ತತ್ವಾಧಿವಾಸ ಹೋಮ ಮಹಾಮಂಗಳಾರತಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಸಹಿತ ಅನೇಕ ಧಾರ್ಮಿಕ ಕಾರ್ಯಗಳು ಜರುಗಿದವು.

ಸಂಜೆ ಸುರಿದ ಭಾರೀ ಮಳೆಯ ನಡುವೆಯೇ ರಥೋತ್ಸವ ನಡೆದು ನೂರಾರು ಭಕ್ತರು ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ.

ನಾದಸ್ವರ, ಚಂಡೆವಾದ್ಯ, ನೃತ್ಯ ಸಹಿತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಾಗಿ, ಭಕ್ತರು ಪರವಶರಾಗಿದ್ದು ಕಂಡು ಬಂತು.

Leave a Comment