ಶೃಂಗೇರಿ ಶಾರದಾ ಮಾತೆ ಪಾದತಲದಲ್ಲಿ ನಡೆದ ‘ಶೃಂಗ ಸಂಭ್ರಮ’ದಲ್ಲಿ ಹೊಸನಗರ ಕೊಡಚಾದ್ರಿ ಕಾಲೇಜಿಗೆ ಚಾಂಪಿಯನ್ ಪಟ್ಟ !

Written by malnadtimes.com

Published on:

HOSANAGARA | 2023-24ನೇ ಸಾಲಿನ ‘ಶೃಂಗ ಸಂಭ್ರಮ’ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ಮಾರಕ ಕಾಲೇಜಿನಲ್ಲಿ ಜು.30ರ ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸುಮಾರು 20 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಹೊಸನಗರ ಕೊಡಚಾದ್ರಿ ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದರು.

ಕು. ನಿಷ್ಮಿತಾ ಭಾವಗೀತೆಯಲ್ಲಿ ಪ್ರಥಮ, ಸುಷ್ಮಿತಾ ಮತ್ತು ತಂಡ ಕೋಲಾಟದಲ್ಲಿ ದ್ವಿತೀಯ, ರಂಜನ್ ಮತ್ತು ತಂಡ ಜನಪದ ಗೀತೆ ದ್ವಿತೀಯ, ಉಜ್ವಲ ಸಿನಿಮಾ ನೃತ್ಯ ಸೋಲೋ ದ್ವಿತೀಯ, ನಿರೂಪಣೆ ರಂಜಿತ ದ್ವಿತೀಯ, ರಶ್ಮಿತಾ ಮತ್ತು ತಂಡ ಸಿನಿಮಾ ನೃತ್ಯ ದ್ವಿತೀಯ ಪಡೆದಿದ್ದಾರೆ.

ಒಟ್ಟು ಅಂಕಗಳ ಆಧಾರದ ಮೇಲೆ ಕೊಡಚಾದ್ರಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಪಡೆದುಕೊಂಡಿದ್ದು, ಸಾಂಸ್ಕ್ರತಿಕ ವೇದಿಕೆ ಸಂಚಾಲಕರಾದ ಡಾ. ಕೆ ಶ್ರೀಪತಿ ಹಳಗುಂದ ಭಾಗವಹಿಸಿದ್ದರು. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ‌.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್. ಸ್ವಾಮಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಮಂಜುನಾಥ್ ಕಂಬಳಗದ್ದೆ ಆಗಮಿಸಿದ್ದರು.

Leave a Comment