SHIVAMOGGA | ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಅದರಲ್ಲೂ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಾದ್ಯಂತ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
THIRTHAHALLI | ಕುಸಿದೇ ಬಿಡ್ತು ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯ ತಡೆಗೋಡೆ !
ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ದಾಖಲಾಗಿದೆ ಎಂದು ವಿವರವಾಗಿ ಇಲ್ಲಿ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟಾಗಿದೆ ಮಳೆ ? (M.M.)
- ಬಿದರಗೋಡು (ತೀರ್ಥಹಳ್ಳಿ) : 178
- ಮಾಣಿ (ಹೊಸನಗರ) : 172
- ಮಾಸ್ತಿಕಟ್ಟೆ (ಹೊಸನಗರ) : 170
- ಹುಲಿಕಲ್ (ಹೊಸನಗರ) : 168
- ಯಡೂರು (ಹೊಸನಗರ) : 145
- ಹೊನ್ನೆತಾಳು (ತೀರ್ಥಹಳ್ಳಿ) : 143
- ಸಾವೇಹಕ್ಲು (ಹೊಸನಗರ) : 140
- ಸುಳಗೋಡು (ಹೊಸನಗರ) : 131.5
- ಮೇಗರವಳ್ಳಿ (ತೀರ್ಥಹಳ್ಳಿ) : 125
- ತೀರ್ಥಮತ್ತೂರು (ತೀರ್ಥಹಳ್ಳಿ) : 120.5
- ಚಕ್ರಾನಗರ (ಹೊಸನಗರ) : 113
- ಕಾರ್ಗಲ್ (ಸಾಗರ) : 113
- ಹೊಸಹಳ್ಳಿ (ತೀರ್ಥಹಳ್ಳಿ) : 103
- ಆರಗ (ತೀರ್ಥಹಳ್ಳಿ) : 95.5
- ನೊಣಬೂರು (ತೀರ್ಥಹಳ್ಳಿ) : 92
- ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 90
- ಬಿದನೂರುನಗರ (ಹೊಸನಗರ) 88
- ಸಾಲ್ಗಡಿ (ತೀರ್ಥಹಳ್ಳಿ) : 83
- ಸೊನಲೆ (ಹೊಸನಗರ) : 70.50
- ಕಂಡಿಕಾ (ಸಾಗರ) : 67.5
- ಮುಂಬಾರು (ಹೊಸನಗರ) : 67
- ಹೊಸೂರು-ಸಂಪೇಕಟ್ಟೆ (ಹೊಸನಗರ) : 66
- ಮೇಲಿನಬೇಸಿಗೆ (ಹೊಸನಗರ) 64.5
- ಹುಂಚ (ಹೊಸನಗರ) : 64
- ಹೊಸನಗರ (ಹೊಸನಗರ) : 59
- ಶಿರವಂತೆ (ಸಾಗರ) : 58.5
- ಬೆಜ್ಜವಳ್ಳಿ (ತೀರ್ಥಹಳ್ಳಿ) : 54.5
- ಹಾದಿಗಲ್ಲು (ತೀರ್ಥಹಳ್ಳಿ) : 53.5
- ನೆರಟೂರು (ತೀರ್ಥಹಳ್ಳಿ) : 53.5
- ಅಮೃತ-ಗರ್ತಿಕೆರೆ (ಹೊಸನಗರ) : 53
- ಮಾರುತಿಪುರ (ಹೊಸನಗರ) : 50.5
- ತ್ರಯಂಭಕಪುರ (ತೀರ್ಥಹಳ್ಳಿ) : 52.5
- ಮುಟುಗುಪ್ಪೆ (ಸೊರಬ) : 51.5
- ಕಲ್ಮನೆ (ಸಾಗರ) : 49.5
- ಹೊಸಬಾಳೆ (ಸೊರಬ) : 49
- ಕೋಡೂರು (ಹೊಸನಗರ) : 48.5
- ಹಿರೇನೆಲ್ಲೂರು (ಸಾಗರ) : 48
- ಭೀಮನಕೋಣೆ (ಸಾಗರ) : 47.5
- ಬೆನ್ನೂರು (ಸೊರಬ) : 47.5
- ದೇಮ್ಲಾಪುರ (ತೀರ್ಥಹಳ್ಳಿ) : 47
- ನಾಡಕಲಸಿ (ಸಾಗರ) : 45
- ಅರಳಿಕೊಪ್ಪ (ಭದ್ರಾವತಿ) :44
- ತೂದೂರು (ತೀರ್ಥಹಳ್ಳಿ) : 43
- ಅರಸಾಳು (ಹೊಸನಗರ) : 32
ಲಿಂಗನಮಕ್ಕಿ ಜಲಾಶಯ :
ಬುಧವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1784.70 ತಲುಪಿದ್ದು ಜಲಾಶಯಕ್ಕೆ 52366 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯ ನೀರಿನ ಮಟ್ಟ 1756.40 ಅಡಿ ದಾಖಲಾಗಿದ್ದು ಕಳೆದ ಬಾರಿಗಿಂತ 28 ಅಡಿ ಹೆಚ್ಚು ಸಂಗ್ರಹವಾಗಿದೆ.