ಹೊಸನಗರ

ಪರೀಕ್ಷೆ ಎದುರಿಸುವುದು ಹೇಗೆ? ಪರೀಕ್ಷೆ ನಂತರ ಮುಂದೇನು? ಫೆ. 1 ಮತ್ತು 2ರಂದು 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ಕಾರ್ಯಗಾರ

ಹೊಸನಗರ ; ಪರೀಕ್ಷೆ ಎಂದಾಕ್ಷಣ ಬಹುತೇಕರಿಗೆ ಅದೇನೋ ಗಾಬರಿ, ಭಯ. ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಫೋಷಕರಿಗೂ ಇಂತಹ ಆತಂಕ ಸಹಜ.

WhatsApp Group Join Now
Telegram Group Join Now
Instagram Group Join Now

ಹೀಗಾಗಿ ಇಂತಹ ಭಯ ಮತ್ತು ಗಾಬರಿಗಳನ್ನು ದೂರಮಾಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ದೃಷ್ಟಿಯಿಂದ ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ಬಸವನಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸನಗರ ಇವರ ಸಹಯೋಗದಲ್ಲಿ ಫೆ.1 ಮತ್ತು 2ರಂದು ವಿಶೇಷ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹೇಳಿದರು.

ಅವರು ಇಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎರಡು ದಿನಗಳ ಕಾಲ ತಾಲ್ಲೂಕಿನ ಮೂರು ಕಡೆಗಳಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಖ್ಯಾತ ಶಿಕ್ಷಣ ತಜ್ಞ, ಅಂತರರಾಷ್ಟ್ರೀಯ ಖ್ಯಾತಿಯ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರ ಧನರಾಜ್ ಈ. ಗಂಗಾವತಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಹೊಸನಗರ ತಾಲೂಕಿನ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಈ ಸಾಧನೆ ಮುಂದುವರೆಯಬೇಕು. ಶಿಕ್ಷಣ ಇಲಾಖೆ ಈಗಾಗಲೇ ಸಾಕಷ್ಟು ಪ್ರಗತಿಯಲ್ಲಿದೆ. ಅದಕ್ಕೆ ನಮ್ಮ ಸಂಸ್ಥೆಯಿಂದ ಚಿಕ್ಕ ಬೆಂಬಲ ಎಂದರು.

ಫೆ. 1ರಂದು ಬಟ್ಟೆಮಲ್ಲಪ್ಪದ ಸಾರ ಕೇಂದ್ರದ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಕಾರ್ಯಾಗಾರ ಆರಂಭವಾಗಲಿದೆ. ಮದ್ಯಾಹ್ನ 3 ಗಂಟೆವರೆಗೂ ನಡೆಯಲಿದೆ. ಕಾರ್ಯಾಗಾರದಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರು, ಶಿಕ್ಷಕರಿಗೆ ಭಾಗವಹಿಸಲು ಅವಕಾಶವಿದೆ. 

ಫೆ.2ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಇಲ್ಲಿ ರಿಪ್ಪನ್‌ಪೇಟೆಯ ಜಿ. ಆರ್.ಕೆ ಟ್ರಸ್ಟ್ ಹಾಗೂ ಶಾಲಾ ಕಾಲೇಜುಗಳು ಸಹಕಾರ ನೀಡಲಿವೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅದೇ ದಿನ ಮಧ್ಯಾಹ್ನ 1ರಿಂದ ಸಂಜೆ 5.30ರವರೆಗೆ ಹೊಸನಗರ ಪಟ್ಟಣದ ಹೋಲಿ ರೆಡಿಮರ್ ಸ್ಕೂಲ್ ಸಭಾಂಗಣದಲ್ಲಿ ಕಾರ್ಯಗಾರ ನಡೆಯಲಿದೆ. ಇಲ್ಲಿ ಹೋಲಿ ರೆಡಿಮರ್ ಹಾಗೂ ಶ್ರೀ ಗುರೂಜಿ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಇತರೆ ಸಂಘ ಸಂಸ್ಥೆಗಳು ಸಹಕಾರ ನೀಡಲಿವೆ.

ಕಾರ್ಯಗಾರದಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಜೊತೆಗೆ ಮಕ್ಕಳಿಗೆ ಸಂಬಂಧಿಸಿದ ಪೋಷಕರು, ಶಿಕ್ಷಕ, ಉಪನ್ಯಾಸಕರು ಭಾಗವಹಿಸಬಹುದಾಗಿದೆ. 

ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ಮಕ್ಕಳು ನಿಗದಿತ ಸಮಯಕ್ಕೆ 10 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಹಾಜರಿರಬೇಕು. ಬರುವಾಗ ಪೆನ್ನು, ನೋಟ್ ಬುಕ್ ತರಬೇಕು. ಮೊದಲ ಅರ್ಧ ಗಂಟೆ ನೋಂದಾವಣೆ ಇರುವುದರಿಂದ ಎಲ್ಲರೂ ಸಮಯಕ್ಕೆ ಮುಂಚಿತವಾಗಿ ಇರಬೇಕು. 

ಶ್ರೀ ವ್ಯಾಸ ಮಹರ್ಷಿ ಗುರುಕುಲ ತಾಲ್ಲೂಕಿನಲ್ಲಿ ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕಳೆದ 15 ವರ್ಷಗಳಲ್ಲಿ 14 ಉಚಿತ ನೇತ್ರ ಶಿಬಿರ, ಬೃಹತ್ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಜೊತೆಗೆ ತಂದೆ ತಾಯಿ ಇಲ್ಲದ, ಅಥವಾ ಏಕ ಪೋಷಕ ಹಾಗೂ ಪೋಷಕರಿದ್ದೂ ಯಾರೊಬ್ಬರು ದೀರ್ಘ ಕಾಲಿಕ ಅನಾರೋಗ್ಯಕ್ಕೆ ತುತ್ತಾಗಿದ್ದಲ್ಲಿ ಅಂತವರ ಮಕ್ಕಳಿಗೂ ಗುರುಕುಲ ಕಳೆದ 15 ವರ್ಷಗಳಿಂದಲೂ ಉಚಿತ ಶಿಕ್ಷಣ ಯೋಜನೆ ಮುಂದುವರೆಸಿಕೊಂಡು ಬರುತ್ತಿದೆ ಎಂದು ಮಂಜುನಾಥ್ ಎಸ್. ಬ್ಯಾಣದ ತಿಳಿಸಿದರು.

ಈ ಶಿಬಿರದ ಸದುಪಯೋಗವನ್ನು ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜಿನ ಮಕ್ಕಳೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]