ಹೊಸನಗರ

ಸಂಸ್ಥೆಯ ಏಳಿಗೆಯಲ್ಲಿ ಷೇರುದಾರರ ಪಾತ್ರ ನಿರ್ಣಾಯಕ : ಬಿಇಒ ಗಣೇಶ್ ವೈ.

ಹೊಸನಗರ: ಸಂಸ್ಥೆಗಳ ಸತತ ಪ್ರಗತಿ ಮತ್ತು ಭವಿಷ್ಯದ ಶ್ರೇಯಸ್ಸಿನಲ್ಲಿ ಷೇರುದಾರರ ಸಹಕಾರವೇ ಮೂಲಸ್ತಂಭ. ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿದಾಗ ಮಾತ್ರ ಸಂಸ್ಥೆಗಳು ಸುಸ್ಥಿರವಾಗಿ ಬೆಳೆಯಲು ಸಾಧ್ಯ ಎಂದು ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಗಣೇಶ್ ವೈ. ಅಭಿಪ್ರಾಯಪಟ್ಟರು.

Hosanagara teachers society

ಹೊಸನಗರ: ಸಂಸ್ಥೆಗಳ ಸತತ ಪ್ರಗತಿ ಮತ್ತು ಭವಿಷ್ಯದ ಶ್ರೇಯಸ್ಸಿನಲ್ಲಿ ಷೇರುದಾರರ ಸಹಕಾರವೇ ಮೂಲಸ್ತಂಭ. ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿದಾಗ ಮಾತ್ರ ಸಂಸ್ಥೆಗಳು ಸುಸ್ಥಿರವಾಗಿ ಬೆಳೆಯಲು ಸಾಧ್ಯ ಎಂದು ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಗಣೇಶ್ ವೈ. ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಗಾಯತ್ರಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಕಾರಿ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ನಿಯಮಾವಳಿಗಳಿಗೆ ಬದ್ಧರಾಗಿ, ಶಿಸ್ತು ಮತ್ತು ಸಂಯಮದಿಂದ ವ್ಯವಹರಿಸುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ಅಂತಹ ತತ್ವಗಳನ್ನು ಪಾಲಿಸುವ ಸಂಸ್ಥೆಗಳು ದೀರ್ಘಕಾಲದವರೆಗೆ ಸದೃಢವಾಗಿ ಬೆಳೆದು ಸದಸ್ಯರ ಹಿತಕಾಯುತ್ತವೆ. ಪ್ರಸ್ತುತ ನಮ್ಮ ಶಿಕ್ಷಕರ ಸಂಘದಲ್ಲಿ ಸದಸ್ಯರು ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘವು ಆರ್ಥಿಕವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಿದೆ ಎಂದರು.

₹6.29 ಲಕ್ಷಕ್ಕೂ ಅಧಿಕ ಲಾಭ:

ಸಂಘದ ವಾರ್ಷಿಕ ಆರ್ಥಿಕ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ ಕಾರ್ಯದರ್ಶಿ ವೆಂಕಟೇಶ್ ಹೆಚ್., 2025-26ನೇ ಸಾಲಿನಲ್ಲಿ ಸಂಘವು ₹6,29,869 ಲಾಭಗಳಿಸಿದೆ. ಪ್ರಸ್ತುತ ವರ್ಷದಲ್ಲಿ ಷೇರು ಬಂಡವಾಳವು ₹63,900ರಷ್ಟು ಹೆಚ್ಚಳವಾಗಿದ್ದು, ಒಟ್ಟು ಬಂಡವಾಳವು ₹20,50,530 ತಲುಪಿದೆ. ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಕಲಂ 122ರ ಪ್ರಕಾರ ಎಲ್ಲಾ 394 ಸದಸ್ಯರ ವಿವರಗಳನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿ, ಷೇರು ಪ್ರಮಾಣಪತ್ರ ವಿತರಿಸಲಾಗಿದೆ ಎಂದು ವಿವರಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

₹10 ಲಕ್ಷದವರೆಗೆ ಸಾಲ ಮಿತಿ ಹೆಚ್ಚಳಕ್ಕೆ ಚಿಂತನೆ:

ಇಲ್ಲಿಯವರೆಗೆ ಸದಸ್ಯರಿಗೆ 30 ಕಂತುಗಳಲ್ಲಿ ಮರುಪಾವತಿಸುವಂತೆ ಗರಿಷ್ಠ ₹3 ಲಕ್ಷದವರೆಗೆ ಸಾಲ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಮಿತಿಯನ್ನು ₹10 ಲಕ್ಷಕ್ಕೆ ಏರಿಸಿ, ಮರುಪಾವತಿಯನ್ನು 72 ಕಂತುಗಳಿಗೆ ವಿಸ್ತರಿಸುವ ಯೋಜನೆ ಇದೆ. ಇದರಿಂದ ಸದಸ್ಯರಿಗೆ ಕಂತು ಪಾವತಿ ಸುಲಭವಾಗಲಿದೆ. ಅಲ್ಲದೆ, ಸಂಘದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಲೆಕ್ಕಪತ್ರ ವಹಿವಾಟನ್ನು ಸರಳಗೊಳಿಸಲು ಶಿವಮೊಗ್ಗದ ‘ಸಿಲಿಕಾನ್ ಸಾಫ್ಟ್‌ವೇರ್’ ಸಂಸ್ಥೆಯ ನೂತನ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳ ಪೈಕಿ ಒಬ್ಬರನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿ.ಪಿ., ಪ್ರಮುಖರಾದ ಎಂ. ರಂಗನಾಥ್, ಶೇಷಾಚಲ ಜಿ. ನಾಯ್ಕ್, ವೆಂಕಟಾಚಲಪತಿ, ಚಂದ್ರಕಾಂತ್, ಪುಟ್ಟಸ್ವಾಮಿ, ಪೃಥ್ವಿರಾಜ್, ಶಿವಪ್ಪ, ಸಂಘದ ನಿರ್ದೇಶಕರಾದ ಅಕ್ಬರ್ ಬಾಷಾ, ದೇವೇಂದ್ರಪ್ಪ ಎಂ., ಮಹಂತೇಶ್ ಟಿ.ಎಸ್., ರವಿ ಮಾವಿನಸರ, ರವಿ ಕೆ., ಜಯಪ್ಪ ಬಿ., ಫಕೀರಪ್ಪ, ಕೃಷ್ಣಪ್ಪ ಅರ್ಕಾಚಾರಿ, ತಾಜುನ್, ಮೇಘರಾಜ್, ಸುಜಾತ, ಉಮೇಶ್, ಪ್ರವೀಣ್, ಸುರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]