Hosanagara

ನಾಮ ನಿರ್ದೇಶಿತ ಸಕ್ರಿಯರಾದಲ್ಲಿ ಆಡಳಿತ ಯಂತ್ರ ಚುರುಕು ; ಬೇಳೂರು ಗೋಪಾಲಕೃಷ್ಣ

HOSANAGARA ; ವಿವಿಧ ಇಲಾಖೆಗಳ ಸಮಿತಿಗೆಆಯ್ಕೆಯಾಗುವ ನಾಮ ನಿರ್ದೇಶಿತ ಸದಸ್ಯರು ಸದಾಕಾರ್ಯಚಟುವಟಿಕೆಯಿಂದ ಇರಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಾಮ ನಿರ್ದೇಶನಗೊಂಡ ಬಳಿಕ ಆ ಸಮಿತಿಯಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ಅರಿತು ಕಾರ್ಯನಿರ್ವಹಿಸಬೇಕು. ಕಾಲೇಜು, ಆಸ್ಪತ್ರೆ, ಆಶ್ರಯ, ಬಗರ್‌ಹುಕುಂ, ನಂತಹ ಸಮಿತಿಗಳ ಸದಸ್ಯರ ಜವಾಬ್ದಾರಿ ಸಾಕಷ್ಟಿದೆ. ಅಧಿಕಾರಿ ವರ್ಗದಿಂದ ತ್ವರಿತಗತಿಯಲ್ಲಿ ಕಾರ್ಯಗಳು ಆಗಬೇಕು ಹಾಗೂ ಯೋಜನೆಗಳ ಲಾಭ ಅರ್ಹರಿಗೆ ದೊರೆಯಬೇಕು. ಅಲ್ಲಿನ ಕುಂದು ಕೊರತೆಗಳ ಮಾಹಿತಿ ಕೆಲ ಹಾಕಿ ಸಭೆಯಲ್ಲಿ ಗಮನಕ್ಕೆ ತರಬೇಕು. ಎಲ್ಲವನ್ನೂ ಶಾಸಕರೇ ಪ್ರತಿನಿತ್ಯ ಗಮನಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಸದಸ್ಯರು ತಮ್ಮ ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಬೇಕು. ನಾಯಕತ್ವಗುಣ ಬೆಳೆಸಿಕೊಳ್ಳಲು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಲು ಸಹಾ ಇದು ಸಹಕಾರಿ ಆಗಲಿದೆ ಎನ್ನುವುದನ್ನು ಮರೆಯಬಾರದು ಎಂದ ಅವರು, ಸಕ್ರಿಯರಾಗಿಲ್ಲದ ಸದಸ್ಯರನ್ನು ಬದಲಾಯಿಸುವ ಚಿಂತನೆ ವ್ಯಕ್ತಪಡಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ 75 ಜನ ನಾಮ ನಿರ್ದೆಶಕರನ್ನು ಸರ್ಕಾರ ನೇಮಿಸಿದೆ ನಾಮನಿರ್ದೆಶಕರಾಗಿ ಆಯ್ಕೆಯಾಗಿರುವ ಸದಸ್ಯರು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಆದರೇ ಪಕ್ಷದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದಿರುವುದು ದುರದೃಷ್ಟಕರ‌ ನಾಮ ನಿದೇಶಕರು ಕೆಲವರನ್ನು ಬಿಟ್ಟು ಅಧಿಕಾರಕ್ಕಾಗಿ ಆಯ್ಕೆಯಾದಂತೆ ಕಾಣುತ್ತಿದ್ದು ಕೆಲವು ನಾಮ ನಿರ್ದೇಶಕರು ಸರ್ಕಾರಿ ಕಛೇರಿಗಳ ಅಧಿಕಾರಿಗಳಿಗೆ ಹೆದರಿಸುವ ತಂತ್ರ ನಡೆಸುತ್ತಿದ್ದಾರೆ ಎಂದು ನಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು ನೀವು ಈ ರೀತಿ ಮಾಡುವುದರಿಂದ ನಮ್ಮ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ  ಅವಮಾನವಾಗುತ್ತಿದೆ. ಮುಂದೆಯೂ ಇವರೆ ಶಾಸಕರಾಗಬೇಕಾದರೆ ನೀವೆಲ್ಲರೂ ಒಗ್ಗಟಿನಿಂದ ಸರ್ಕಾರದ ಎಲ್ಲ ಯೋಜನೆಗಳನ್ನು ಗ್ರಾಮಸ್ಥರಿಗೆ ತಲುಪಿಸುವಂತೆ ಕೆಲಸ ಮಾಡಬೇಕೆಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮತಿ ಅಧ್ಯಕ್ಷ ಎಚ್.ಬಿ.ಚಿದಂಬರ್, ಶಾಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಸುಮಾ ಸುಬ್ರಹ್ಮಣ್ಯ, ಸದಾಶಿವ ಶ್ರೇಷ್ಠಿ, ಗುರುರಾಜ್ ಹೆಚ್.ಕೆ, ಜ್ಯೋತಿ ಚಂದ್ರಮೌಳಿ  ಉಪಸ್ಥಿತರಿದ್ದರು.

ವಿವಿಧ ಸಮಿತಿಗಳ ಸುಮಾರು 75ಕ್ಕೂ ಹೆಚ್ಚು ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>