ದೇವಸ್ಥಾನ ಸ್ವಚ್ಚಗೊಳಿಸಿದರೆ ಮನಸ್ಸು ಸ್ವಚ್ಚವಾದಂತೆ ; ಪ್ರದೀಪ್ ಕೆ.ಆರ್

Written by Mahesha Hindlemane

Published on:

ಹೊಸನಗರ : ದೇವಸ್ಥಾನ ಸ್ವಚ್ಚಗೊಳಿಸಿದರೆ ನಮ್ಮ ಮನಸ್ಸು ಸ್ವಚ್ಚವಾದಂತೆ ಎಂದು ಹೊಸನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಕೆ.ಆರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಮಾತನಾಡಿದ ಅವರು, ದೇವಸ್ಥಾನ ನಮಗೆ ಒಂದು ಪ್ರವಿತ್ರ ಸ್ಥಳವಾಗಿದೆ ಆ ಸ್ಥಳವನ್ನು ಸ್ವಚ್ಚಗಳಿಸುವುದರ ಜೊತೆಗೆ ನಮ್ಮ ಮನಸ್ಸಿನಲ್ಲಿರುವ ಕಲ್ಮಶಗಳನ್ನು ಕಸದಂತೆ ತೆಗೆದು ಹಾಕಬೇಕು ಆಗ ಮಾತ್ರ ನಾವು ಮಾಡಿದ ಕೆಲಸಕ್ಕೆ ಆಪ್ತ ತೃಪ್ತಿ ಸಿಗುವುದರ ಜೊತೆಗೆ ನಮ್ಮ ಮನಸ್ಸಿನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ಸಾಧ್ಯ ಎಂದು ನಮ್ಮ ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆಯುವುದರ ಜೊತೆಗೆ ನಿಮ್ಮ ಸುತ್ತ-ಮುತ್ತಲಿರುವ ದೇವಸ್ತಾನಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದರು.

ಜನಜಾಗೃತಿ ಸಂಘದ ನಿರ್ದೇಶಕ ಎನ್.ಆರ್ ದೇವಾನಂದ್, ನಗರ ನಾರಾಯಣ ಕಾಮತ್, ಗಂಗಾಧರೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ನಾಗರಾಜ್ ಕಾಮತ್, ಗ್ರಾಮ ಪಂಚಾಯತಿ ಸದಸ್ಯರಾದ ದಿವ್ಯ ಬೃಂದಾವನ ಪ್ರವೀಣ್, ಗೌತಮ್ ಕುಮಾರಸ್ವಾಮಿ ಹಾಗೂ ಶ್ರೀಧರ್ಮಸ್ಥಳ ಮಹಿಳಾ ಸಂಘದ ಎಲ್ಲ ಸದಸ್ಯರು, ಒಕ್ಕೂಟ ಸದಸ್ಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment