ಊರು ಸ್ವಚ್ಛವಾಗಿದ್ದರೆ ದೇಶದ ಸಂಸ್ಕೃತಿಯು ಸ್ವಚ್ಛವಾಗಿರುತ್ತದೆ ; ಮೂಲೆಗದ್ದೆ ಶ್ರೀಗಳು

Written by malnadtimes.com

Published on:

HOSANAGARA ; ಯಾವುದೇ ಗ್ರಾಮ ನಗರ ಪಟ್ಟಣಗಳು ಸ್ವಚ್ಚವಾಗಿದ್ದರೆ ಆ ಗ್ರಾಮದ ಪರಿಸ್ಥತಿಯು ಸಂದರವಾಗಿರುತ್ತದೆ ವಾಸಿಸುವ ಜನರು ಸ್ವಚ್ಛ ಶುಭ್ರವಾಗಿರುತ್ತಾರೆ ದೇಶದ ಸಂಸ್ಕೃತೀಯು ಸ್ವಚ್ಛವಾಗಿರುತ್ತದೆ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹೊಸನಗರ ತಾಲೂಕು ವತಿಯಿಂದ ನಮ್ಮ ಊರು ನಮ್ಮ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಈ ವರ್ಷದಲ್ಲಿ 67 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೂಲೆಗದ್ದೆ ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಇದರಿಂದಾಗಿ ರಾಜ್ಯಾದ್ಯಂತ ಮನೆ ಮನೆಗಳಲ್ಲಿ, ದೇವಸ್ಥಾನ, ಮಠ, ಮಸೀದಿ, ಚರ್ಚ್ ಶಾಲಾ ಆವರಣ ಹಾಗೂ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಪೂಜ್ಯರು ಪ್ರತಿ ನಾಗರೀಕನಿಗೂ ಸಂದೇಶ ನೀಡುತ್ತಿದ್ದು, ಇದನ್ನು ಪ್ರತಿ ನಾಗರಿಕರೂ ಅರಿಯಬೇಕಾಗಿದೆ ಎಂದರು.

ಹೊಸನಗರ ತಾಲೂಕು ಯೋಜನಾಧಿಕಾರಿಗಳಾದ ಪ್ರದೀಪ್‌ ಆರ್‌ ಈ ಸಂದರ್ಭದಲ್ಲಿ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಇದನ್ನು ಅರಿತಾಗಲೇ ಮುಂದಿನ ನಮ್ಮ ಪೀಳಿಗೆ ನಮ್ಮ ಪರಿಸರವನ್ನು ಕಾಪಾಡಿಕೊಳ್ಳಲು ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೇಶದಲ್ಲಿಯೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂಬ ಪ್ರಶಸ್ತಿಗೊಳಗಾದ ಸಂತೊಷವನ್ನು ಗ್ರಾಮ ಗ್ರಾಮಗಳಲ್ಲಿ ಹಂಚಿಕೊಳ್ಳುವಂತೆ ಮತ್ತು ಪ್ರಶಸ್ತಿ ನೆನಪಿನಲ್ಲುಳಿಯುವಂತೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ 2016ರಿಂದ ಶ್ರದ್ಧಾಕೇಂದ್ರ ಎನ್ನುವ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ರಾಜ್ಯಾದ್ಯಂತ ಉತ್ತಮ ಪರಿಣಾಮ ಉಂಟಾಗಿರುತ್ತದೆ. ಮಕರ ಸಂಕ್ರಾತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಜನವರಿ14ರಂದು ಪೂಜಾ ಮಂದಿರಗಳು ಹಾಗೂ ಶ್ರದ್ಧಾ ಕೇಂದ್ರಗಳು ಸ್ವಚ್ಛತೆ ಮತ್ತು ಪಾವಿತ್ರತೆಯಿಂದ ಕೂಡಿರಬೇಕು ಎನ್ನುವುದು ಪೂಜ್ಯರ ಆಶಯವಾಗಿದೆ ಎಂದರು.

ಈ ಸ್ವಚ್ಛತ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾಜನಜಾಗೃತಿ ಸದಸ್ಯರಾದ ಶ್ರೀ ದೇವಾನಂದ ಎನ್‌.ಆರ್, ಸಾಮಾಜಿಕ ಕಾರ್ಯಕರ್ತರಾದ ಸುಧೀಂದ್ರ ಪಂಡಿತ್, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಹುಂಚರೋಡ್ ಒಕ್ಕೂಟದ ಅಧ್ಯಕ್ಷ ಹರೀಶ್, ಮಾವಿನಕೊಪ್ಪ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಭುಗೌಡ್ರು, ವಲಯ ಮೇಲ್ವಿಚಾರಕ ತಿಪ್ಪೇಶ್, ಸೇವಾಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment